ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ಧಾರವಾಡದಲ್ಲಿ ಮಳೆ ಆಗಿದ್ದು.. ಹುಬ್ಬಳ್ಳಿಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಶಾಲೆ ಬಲಿ ಹಳ್ಳವೊಂದು ತುಂಬಿ ಹರಿದಿದೆ. ಇದ್ರಿಂದ ಶಾಲೆಯಲ್ಲಿ ಸುಮಾರು 3 ತಾಸು ಮಕ್ಕಳು ಸಿಲುಕಬೇಕಾಯ್ತು. ಬಳಿಕ ಹಳ್ಳದ ನೀರು ಇಳಿದ ಮೇಲೆ ರಾತ್ರಿ 7 ಗಂಟೆ ಹೊತ್ತಿಗೆ ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಯ್ತು. ಮಂಡ್ಯದಲ್ಲೂ ಮಳೆ ಆಗಿದ್ದು.. ಮಹಾವೀರ ವೃತ್ತದಲ್ಲಿ ನೀರು ನಿಂತು ಅವಾಂತರವೇ ಸೃಷ್ಟಿ ಆಗಿತ್ತು. ಬೈಕ್. ಕಾರುಗಳು ಮಳೆ ನೀರಿನಲ್ಲಿ ಮುಳುಗಿದ್ದವು.. ಇನ್ನು ಬೆಳಗಾವಿಯಲ್ಲೂ ಮಳೆ ಆಗಿದ್ದು.. ಸವದತ್ತಿಯ ರೇಣುಕಾದೇವಿ ದೇಗುಲದ ಆವರಣಕ್ಕೆ ನೀರು ನುಗ್ಗಿ ಭಕ್ತರು ಪರದಾಡುವಂತಾಯ್ತು. ಕೋಲಾರ, ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ಆನೇಕಲ್, ಚಂದಾಪುರ, ಅತ್ತಿಬೆಲೆ, ಎಲೆಕ್ಟ್ರಾನ್ ಸಿಟಿ, ಬನ್ನೇರುಘಟ್ಟ ಭಾಗದಲ್ಲಿ ಮಳೆ ಆಗಿದೆ. ನೆಲಮಂಗಲದಲ್ಲೂ ರಾತ್ರಿಯಿಡೀ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ರಾತ್ರಿ ವೇಳೆಗೆ ಆರಂಭವಾದ ಮಳೆ ಮುಂಜಾನೆವರೆಗೂ ಸುರಿದಿದೆ. ಅತ್ತ, ಅಸ್ಸಾಂ, ಮೇಘಾಲಯದಲ್ಲಿ ಮೇಘಸ್ಫೋಟವಾಗಿದೆ. ಮೇಘಾಲಯದಲ್ಲಿ ಮಳೆಯಿಂದಾಗಿ ಭೂಕುಸಿತವಾಗಿದ್ದು.. ಐವರು ಮೃತಪಟ್ಟಿದ್ದಾರೆ. ಅಸ್ಸಾಂನ ಗೋಲ್ಪರದಲ್ಲಿ ರಸ್ತೆಕುಸಿತವಾಗಿ ಇಬ್ಬರು ಸಹೋದರಿಯರು ಸಾವನ್ನಪ್ಪಿದ್ದಾರೆ. ಕಳೆದ 3 ದಿನಗಳಿಂದ ಈವರೆಗೆ ಭೂಕುಸಿತಕ್ಕೆ 44 ಮಂದಿ ಬಲಿ ಆಗಿದ್ದಾರೆ.
#publictv #newscafe #hrranganath #rain