ಬೆಂಗಳೂರಿನಲ್ಲಿ 2 ದಿನಗಳಿಂದ ರಾತ್ರಿ ಹೊತ್ತಲ್ಲೇ ಮಳೆ ಸುರೀತಿದೆ. ನಿನ್ನೆ ರಾತ್ರಿ ಮಹದೇವಪುರ ವಲಯದಲ್ಲಿ 90ರಿಂದ-180 ಮಿಲಿಮೀಟರ್‍ವರೆಗೆ ಮಳೆಯಾಗಿದೆ. 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆ.ಆರ್ ಪುರಂ ಭಾಗದಲ್ಲಿ ಮಳೆರಾಯ ಆರ್ಭಟಿಸಿದ್ದು.. ಕಾವೇರಿ ನಗರದಲ್ಲಿ ಗೋಡೆ ಕುಸಿದು 55 ವರ್ಷದ ಮುನಿಯಮ್ಮ ಅನ್ನೋವ್ರು ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಗೆ ಮೃತ ಮುನಿಯಮ್ಮ ಮೃತದೇಹ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಗಾಯತ್ರಿ ಬಡಾವಣೆಯಲ್ಲಿ ಕೊಚ್ಚಿ ಹೋಗ್ತಿದ್ದ ಬೈಕ್ ರಕ್ಷಿಸಲು ಹೋದ 24 ವರ್ಷದ ಯುವಕ ಮಿಥುನ್ ನಾಪತ್ತೆ ಆಗಿದ್ದಾನೆ. ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‍ಎಫ್ ತಂಡ ಶೋಧ ನಡೆಸ್ತಿದ್ದಾರೆ. ಸ್ನೇಹಿತರ ಜೊತೆ ವಾಸವಿದ್ದ ಶಿವಮೊಗ್ಗ ಮೂಲದ ಮಿಥುನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಕಲ್ಕೆರೆ ಗ್ರಾಮ ಜಲಾವೃತವಾಗಿದ್ದು, ಮನೆಗಳಿಗೆ ನುಗ್ಗಿದ ನೀರು ಸುಮಾರು 1 ಕಿ.ಮೀ.ವರೆಗೆ ನಿಂತಿದೆ. ಕೆ.ವಿ ಲೇಔಟ್ ಸಂಪೂರ್ಣ ಮುಳುಗಿದೆ. 20ಕ್ಕೂ ಹೆಚ್ಚು ಮನೆಗಳ ವಸ್ತುಗಳೆಲ್ಲಾ ನೀರು ಪಾಲಾಗಿದೆ. ರಾತ್ರಿಯಿಡಿ ನೀರು ಹೊರಹಾಕುವುದರಲ್ಲಿ ಜನ ಜಾಗರಣೆ ಮಾಡಿದ್ರು. ಕೃಷ್ಣ ಚಿತ್ರಮಂದಿರದ ಗೋಡೆ ಕುಸಿದು 24 ಬೈಕ್‍ಗಳು ಜಖಂ ಆಗಿದೆ. ಚಾರ್ಲಿ ಸಿನಿಮಾ ಸೆಕೆಂಡ್ ಶೋ ನೋಡಲು ಬಂದಿದ್ದ ಜನ, ಕಾಂಪೌಂಡ್ ಬಳಿ ಬೈಕ್ ಪಾರ್ಕ್ ಮಾಡಿದ್ದರು. ಸ್ಥಳಕ್ಕೆ ಸ್ಥಳೀಯಶಾಸಕ, ಸಚಿವ ಬೈರತಿ ಬಸವರಾಜ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಯಾರೂ ಭಯ ಪಡ್ಬೇಡಿ. ಸರ್ಕಾರ ಇದೆ ಅಂದ್ರು. ಈ ಮಧ್ಯೆ, ಕಳೆದ ತಿಂಗಳ 17ರಂದೇ ಹೊರಮಾವು ಸಾಯಿಲೇಔಟ್ ಮುಳುಗಿದ್ದಾಗ ಸಿಎಂ ಬೊಮ್ಮಾಯಿ ಅಷ್ಟದಿಕ್ಪಾಲಕರಿಗೆ ಮಳೆ ಅವಾಂತರ ನಿರ್ವಹಣೆ ಹೊರಿಸಿದ್ದರು.
#publictv #newscafe #hrranganath #rain