Big Bulletin | Maharashtra Crisis: Relief For Rebels From Supreme Court | HR Ranganath | June 27, 2022

Public TV 2022-06-27

Views 1

ಮಹಾರಾಷ್ಟ್ರ ಮೆಗಾ ಪೊಲಿಟಿಕಲ್ ಡ್ರಾಮಾಗೆ ಸದ್ಯಕ್ಕೆ ತೆರೆ ಬೀಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಡೆಪ್ಯೂಟಿ ಸ್ಪೀಕರ್ ನೀಡಿದ್ದ ಅನರ್ಹತೆ ನೊಟೀಸ್‍ಗೆ ಪ್ರಶ್ನಿಸಿ ಏಕ್‍ನಾಥ್ ಶಿಂಧೆ ಬಣ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರೆಬೆಲ್ ಟೀಂಗೆ ರಿಲೀಫ್ ನೀಡಿದೆ. ಮಹಾ ಸರ್ಕಾರಕ್ಕೆ ಶಾಕ್ ನೀಡಿದೆ. ಭಿನ್ನಮತೀಯ ಶಾಸಕರ ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ, ಡೆಪ್ಯೂಟಿ ಸ್ಪೀಕರ್‍ಗೆ, ವಿಧಾನಸಭೆ ಕಾರ್ಯದರ್ಶಿಗೆ, ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಅಜಯ್ ಚೌಧರಿಗೆ ಸುಪ್ರೀಂಕೋರ್ಟ್ ನೊಟೀಸ್ ಜಾರಿ ಮಾಡಿದೆ. ಅನರ್ಹತೆ ನೊಟೀಸ್‍ಗೆ ಉತ್ತರಿಸಲು ರೆಬೆಲ್ ಶಾಸಕರಿಗೆ ಜುಲೈ 11ರವರೆಗೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೂ ರೆಬೆಲ್ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್‍ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಅಲ್ಲಿಯವರೆಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತಕ್ಕೆ ಅವಕಾಶ ನೀಡದಂತೆ ಮಹಾರಾಷ್ಟ್ರ ಸರ್ಕಾರದ ಪರ ವಕೀಲರು ಮಾಡಿಕೊಂಡ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಶಿವಸೇನೆ ನಾಯಕರ ಕೋರಿಕೆ ಮೇರೆಗೆ ಶಿಂಧೆ ಸೇರಿ 16 ರೆಬೆಲ್ ಶಾಸಕರ ವಿರುದ್ಧ ಅನರ್ಹತೆ ನೊಟೀಸ್ ಜಾರಿಯಾಗಿತ್ತು. ಡೆಪ್ಯೂಟಿ ಸ್ಪೀಕರ್ ನೀಡಿದ್ದ ಗಡುವಿನ ಪ್ರಕಾರ ಇಂದು ಸಂಜೆ ಐದು ಗಂಟೆಯೊಳಗೆ ರೆಬೆಲ್‍ಗಳು ಉತ್ತರ ನೀಡಬೇಕಿತ್ತು. ಆದ್ರೆ, ಅದಕ್ಕೂ ಮೊದಲೇ ರೆಬೆಲ್‍ಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಸುಪ್ರೀಂ ತೀರ್ಪಿನ ಬೆನ್ನಲ್ಲೇ ಟ್ವೀಟ್ ಮಾಡಿದ ಏಕ್‍ನಾಥ್ ಶಿಂಧೆ, ಸರ್ವೋಚ್ಛ ನ್ಯಾಯಾಲಯ ಆದೇಶವನ್ನು ಸ್ವಾಗತಿಸಿದ್ದಾರೆ. ಇದು ಹಿಂದುತ್ವದ ರಾಜ ಬಾಳಸಾಹೇಬರ ಗೆಲುವು. ಧರ್ಮವೀರ್ ಆನಂದ್ ದಿಘೆಯವರ ಸಿದ್ದಾಂತಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ. ಸುಪ್ರೀಂಕೋರ್ಟ್ ವಿಶ್ವಾಸಮತ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉದ್ಧವ್ ಸರ್ಕಾರದ ವಿರುದ್ಧ ಅವಿಶ್ವಾಸ ತೀರ್ಮಾನ ಪ್ರಕಟಿಸಿ, ರಾಜ್ಯಪಾಲರಿಗೆ ಶಿಂಧೆ ಬಣ ಪತ್ರ ಬರೆಯುವ ಸಂಭವ ಇದೆ.

#publictv #bigbulletin #hrranganath

Share This Video


Download

  
Report form
RELATED VIDEOS