ನಾಲ್ಕು ದಿನಗಳ ಹಿಂದೆ ಸಂಭವಿಸಿದ ಘನಘೋರ ದುರಂತದಿಂದ ಬಂದ್ ಆಗಿದ್ದ ಅಮರ್‍ನಾಥ್ ಯಾತ್ರೆ ಇಂದಿನಿಂದ ಮತ್ತೆ ಶುರುವಾಗಿದೆ. ಪಂಜ್‍ತರಣಿ ಬೇಸ್ ಕ್ಯಾಂಪ್‍ನಿಂದ ಅಮರನಾಥ್ ಯಾತ್ರೆಗೆ ತೆರಳಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಕುದುರೆ ಮತ್ತು ಕಾಲ್ನಡಿಗೆ ಮೂಲಕ ಅಮರನಾಥ ದರ್ಶನಕ್ಕೆ 7ಸಾವಿರಕ್ಕೂ ಭಕ್ತರು ತೆರಳ್ತಿದ್ದಾರೆ. ಎಲ್ಲೆಲ್ಲೂ ಬಂಬಂ ಬೋಲೆನಾಥ್ ಘೋಷಣೆಗಳು ಮುಗಿಲುಮುಟ್ಟಿವೆ. ಗುಹಾ ಲಿಂಗದ ದರ್ಶನ ಪಡೆದ ಭಕ್ತರು ಬಲ್ತಾಲ್ ಬೇಸ್ ಕ್ಯಾಂಪ್ ಮಾರ್ಗವಾಗಿ ನಿರ್ಗಮಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಇವತ್ತು ಬಲ್ತಾಲ್ ಬೇಸ್ ಕ್ಯಾಂಪ್ ಕಡೆಯಿಂದ ಭಕ್ತರನ್ನು ಅಮರನಾಥ ಯಾತ್ರೆಗೆ ಕಳಿಸುತ್ತಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ನಾಲ್ಕು ದಿನಗಳಿಂದ ಕುಂಭದ್ರೋಣ ಮಳೆ ಆಗ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಅತ್ತ ಪಾಕಿಸ್ತಾನದಲ್ಲಿ ರಣ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ 57ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.
#publictv #bigbulletin #hrranganath