ರಾಮನಗರ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ರೂ ಅವಾಂತರಗಳು ಮುಂದುವರಿವೆ. ರಾಮನಗರ ತಾಲೂಕಿನ ಗದಗಯ್ಯನದೊಡ್ಡಿ ಹಾಗೂ ಲಿಂಗೇಗೌಡನ ದೊಡ್ಡಿಗೆ ನಡುವಿನ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು ಸಂಪರ್ಕ ಕಡಿತವಾಗಿದೆ. ಸೇತುವೆ ಕುಸಿತ ಹಿನ್ನೆಲೆ ಮಕ್ಕಳು 7ಕಿ.ಮೀ ನಡೆದು ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂತನ ಸೇತುವೆಗೆ ಅನುದಾನ ಬಿಡುಗಡೆಯಾಗಿದ್ರೂ ಸಹ ಕಳೆದ 4 ವರ್ಷದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಗಳು ಹಾಗೂ ಸ್ಥಳೀಯರಿಗೆ ಮನವಿ ಮಾಡಿದ್ರೂ ಪ್ರಯೋಜನವಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
#publictv #ramanagara #rain