ರಸ್ತೆ ಗುಂಡಿ ವಿರುದ್ಧ ಜನಾಕ್ರೋಶ ಸರ್ವೇ ಸಾಮಾನ್ಯವಾಗ್ಬಿಟ್ಟಿದೆ.. ಕಳಪೆ ಕಾಮಗಾರಿಗೆ ಎಲ್ಲೆಲ್ಲೂ ಈಗ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರಾಗಿದೆ. ಈ ರಸ್ತೆ ಗುಂಡಿ ವಿರುದ್ಧ ಜನರು ವಿಭಿನ್ನವಾಗಿ ಪ್ರತಿಭಟನೆ ಮಾಡೋರನ್ನ ನೋಡಿದ್ದೇವೆ.. ಕೆಸರುಮಯವಾದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಎಚ್ಚರಿಸೋದನ್ನ ನೋಡಿದ್ದೇವೆ. ರಸ್ತೆ ತಡೆದು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗೋದನ್ನ ನೋಡಿದ್ದೇವೆ. ಆದ್ರೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ರಸ್ತೆ ಗುಂಡಿ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾನೆ. ಅಲ್ಲಿನ ಸ್ಥಳೀಯ ಶಾಸಕರ ಎದುರೇ ಬಟ್ಟೆ ಬಿಚ್ಚಿ ರಸ್ತೆ ಗುಂಡಿಯ ನೀರಿನಲ್ಲೇ ಸ್ನಾನ ಮಾಡಿ, ಯೋಗಾ ಮಾಡೋ ಮೂಲಕ ಪ್ರೊಟೆಸ್ಟ್ ಮಾಡಿದ್ದಾನೆ. ಅಲ್ಲಿನ ಶಾಸಕ ಯುಎ ತಿಲಕ್ ಸ್ಥಳಕ್ಕೆ ಆಗಮಿಸುತ್ತಿದ್ದನ್ನೆ ನೋಡಿ ಗುಂಡಿ ನೀರಲ್ಲಿ ಸ್ನಾನ ಮಾಡಿ ಎಚ್ಚರಿಸಿದ್ದಾನೆ.
========
ವಿಶ್ವವಿಖ್ಯಾತ ಮೈಸೂರು ದಸರಾಗೆ ಸಾಂಸ್ಕøತಿಕ ನಗರಿ ಸಿದ್ಧಗೊಳ್ತಿದೆ. ಸದ್ಯ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ದಸರಾ ಗಜಪಡೆ ತಂಗಿದೆ. ಇಂದು ಅರಮನೆ ಅಂಗಳವನ್ನು ಪ್ರವೇಶ ಮಾಡಲಿವೆ ದಸರಾ ಗಜಪಡೆಗಳು. ಮೊದಲ ಹಂತದಲ್ಲಿ ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ 9 ಆನೆಗಳು ಕಾಡಿನಿಂದ ನಾಡಿಗೆ ಬಂದಿವೆ. 2 ದಿನಗಳ ಕಾಲ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆದಿದ್ದ ದಸರಾ ಗಜಪಡೆಗಳು ಕಾಲ್ನಡಿಗೆ ಮೂಲಕ ಅರಣ್ಯ ಭವನದಿಂದ ಮೈಸೂರು ಅರಮನೆಗೆ ಎಂಟ್ರಿ ಕೊಡಲಿವೆ. ಡಿಸಿಎಫ್ ಕರಿಕಲಾನ್ ನೇತೃತ್ವದಲ್ಲಿ ದಸರಾ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಭಾರಿ ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ.
#publictv #newscafe #hrranganath