ಹೈಕೋರ್ಟ್ ಎಸಿಬಿಯನ್ನ ರದ್ದುಗೊಳಿಸಿ ಎಸಿಬಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದೆ. ಹೈಕೋರ್ಟ್‍ನ ಈ ಆದೇಶದಿಂದ ಲೋಕಾಯುಕ್ತಕ್ಕೆ ಮರು ಜೀವ ಬಂದಿದೆ. ಎಸಿಬಿಯನ್ನ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಭ್ರಷ್ಟ ರಾಜಕಾರಣಿಗಳಿಗೆ ಲೋಕಾಯುಕ್ತಕ್ಕೆ ಮರು ಜೀವ ಬಂದಿರೋದು ನಿದ್ದೆಗೆಡಿಸಿದೆ. ಎಸಿಬಿಗೂ ಮುನ್ನ ಭ್ರಷ್ಟ ಶಾಸಕರ, ಮಂತ್ರಿಗಳ ಭೇಟೆಯಾಡಿ ಭ್ರಷ್ಟ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಮತ್ತೆ ಕಾರ್ಯಚರಣೆಗೆ ಇಳಿದ್ರೆ ಭ್ರಷ್ಟರಾಜಕಾರಣಿಗಳ ಅಸಲಿಮುಖ ಬಯಲಾಗೋದ್ರಲ್ಲಿ ಅನಮಾನವೇ ಇಲ್ಲ.
#publictv #newscafe #hrranganath