ಶಿವಮೊಗ್ಗ ಗಲಭೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ಹಿಂದೂ ಸಂಘಟನೆಗಳು ಮುಗಿಬಿದ್ದಿವೆ. ಕಾನೂನು ಸುವ್ಯವಸ್ಥೆ ಕುಸಿದಿದೆ, ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಮುತಾಲಿಕ್ ಕಿಡಿಕಾರಿದಾರೆ. ಈ ಗಲಭೆ ಹಿಂದೆ ಕಾಂಗ್ರೆಸ್ ಇದೆ ಎಂದು ಮಾಜಿ ಮಂತ್ರಿ ಈಶ್ವರಪ್ಪ ಆರೋಪಿಸಿದ್ದಾರೆ. ಕಮಲ ನಾಯಕರ ಆರೋಪಗಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಿಜೆಪಿಯವರಿಗೆ ಕಾಮಾಲೆ ಕಣ್ಣು ಏನ್ಮಾಡೋದು. ಬೊಮ್ಮಾಯಿ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ. ಈ ಸರ್ಕಾರವನ್ನು ಆದಷ್ಟು ಬೇಗ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಗಲಭೆಗಳಿಗೆ ಬಿಜೆಪಿಯೇ ಕಾರಣ ಎಂದು ದೂಷಿಸಿದ್ದಾರೆ. ಅತ್ತ ಸಿಎಂ ಮಾತನಾಡಿ ತನಿಖೆ ನಡೀತಿದೆ, ಕಠಿಣ ಕ್ರಮಕ್ಕೆ ಪೋಲಿಸರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಪೊಲೀಸರು ಕೆಲಸ ಮಾಡೇ ಇಲ್ಲ ಅಂತ ಹೇಳಲು ಆಗಲ್ಲ. ಒಂದು ಕಠಿಣ ಸಂದೇಶ ಕೊಡಬೇಕು ಮತೀಯವಾದಿಗಳಿಗೆ.. ಯಾವ ಸಂದೇಶ ಕೊಡಬೇಕಿತ್ತೋ ಆ ಸಂದೇಶ ನಾವು ಕೊಟ್ಟಿಲ್ಲ ಅಂತ ಸಿ.ಟಿ,ರವಿ ಹೇಳಿದ್ದಾರೆ.
#publictv #shivamogga