ಜಮ್ಮು ಕಾಶ್ಮೀರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 39 ಭದ್ರತಾ ಸಿಬ್ಬಂದಿ ಪಯಣಿಸ್ತಿದ್ದ ಬಸ್ ನದಿಗೆ ಬಿದ್ದ ಘಟನೆ ನಡೆದಿದೆ. ದುರಂತದಲ್ಲಿ ಆರು ಯೋಧರು ಹುತಾತ್ಮರಾಗಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಏರ್ ಆಂಬ್ಯುಲೆನ್ಸ್ ಮೂಲಕ ಶ್ರೀನಗರದ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ದುರಂತಕ್ಕೀಡಾದ ಬಸ್ಸಲ್ಲಿ 37 ಐಟಿಬಿಪಿ ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರಿದ್ದರು. ಯೋಧರು ಅಮರನಾಥ ಯಾತ್ರೆಯ ಕರ್ತವ್ಯ ಮುಗಿಸಿ ಚಂದನ್‍ವಾರಿಯಿಂದ ಪೆಹಲ್‍ಗಾಮ್‍ಗೆ ತೆರಳುತ್ತಿದ್ದಾಗ ಬಸ್ ಬ್ರೇಕ್ ಫೇಲ್ ಆಗಿ, ನದಿಗೆ ಉರುಳಿದೆ ಎಂದು ಐಟಿಬಿಪಿ ತಿಳಿಸಿದೆ.
#publictv #hrranganath #bigbulletin