ಜಮ್ಮು ಕಾಶ್ಮೀರ ಚುನಾವಣಾ ಆಯೋಗ ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡಿದೆ. ಸ್ಥಾನಿಕರಲ್ಲದವರಿಗೂ ಮತದಾನದ ಹಕ್ಕು ನೀಡಿ ನಿರ್ಣಯ ತೆಗೆದುಕೊಂಡಿದೆ. 370ನೇ ವಿಧಿ ರದ್ದು ಮಾಡಿ, ಜಮ್ಮು ಕಾಶ್ಮೀರ, ಲಡಾಖ್‍ಗಳು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾದ ನಂತರ ರಾಜಕೀಯ ಸ್ಥಿರತೆ ಸ್ಥಾಪನೆಗಾಗಿ ಕೇಂದ್ರ ಪ್ರಯತ್ನಗಳನ್ನು ಶುರು ಮಾಡಿದೆ. ಇದರ ಭಾಗವಾಗಿ ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸೋದಾಗಿ ಅಮಿತ್ ಶಾ ಈ ಹಿಂದೆ ಘೋಷಣೆ ಮಾಡಿದ್ರು. ಇದೀಗ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಸ್ಥಳೀಯರಲ್ಲದವರಿಗೂ ಮತದಾನದ ಹಕ್ಕು ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು.. ಹೀಗೆ ಬೇರೆ ಕಡೆಯಿಂದ ಬಂದು ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವವರಿಗೆ ಮತದಾನದ ಹಕ್ಕು ಸಿಗಲಿದೆ. ಅಷ್ಟೇ ಅಲ್ಲ, ಮತ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅರ್ಜಿಯಲ್ಲಿ ವಾಸಸ್ಥಳವನ್ನು ತುಂಬುವುದು ಕೂಡ ಕಡ್ಡಾಯ ಅಲ್ಲ.. ಇದಕ್ಕೆ ವಿನಾಯ್ತಿ ನೀಡೋದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಆದ್ರೆ ಇ.ಸಿ ನಿರ್ಧಾರಕ್ಕೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಪಕ್ಷಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಮೆಹಾಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ಸೇರಿ ಹಲವರು ಸರಣಿ ಟ್ವೀಟ್ ಮಾಡಿದ್ದಾರೆ.
#publictv #hrranganath #bigbulletin