ಎರಡು ಬಾರಿ ಮುಂದೂಡಿಕೆ ಆಗಿದ್ದ ಸರ್ಕಾರದ ಸಾಧನಾ ಸಮಾವೇಶ ನಾಳೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ನಡೆಯಲಿದೆ. ರಘುನಾಥಪುರದ 40 ಎಕರೆ ಮೈದಾನದಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ನಾಳೆ ಸಿಎಂ ಬೊಮ್ಮಾಯಿ ಜನರ ಮುಂದಿಡಲಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮøತಿ ಇರಾನಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸುಮಾರು 2ರಿಂದ 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಚಿವರಾದ ಸುಧಾಕರ್, ಮುನಿರತ್ನ ಮತ್ತು ಎಂಟಿಬಿ ನಾಗರಾಜ್ ಸಮಾವೇಶದ ಸಿದ್ಧತೆ ನೋಡಿಕೊಂಡಿದ್ದಾರೆ. ಸಮಾವೇಶ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಇಡೀ ದೊಡ್ಡಬಳ್ಳಾಪುರ ಕೇಸರಿಮಯವಾಗಿದೆ. ಸಿದ್ಧತೆಗೂ ಮುನ್ನ ವೇದಿಕೆ ಮೇಲೆ ಹೋಮ-ಹವನ ನಡೆಸಲಾಯ್ತು.
#publictv #janotsav #bjp #ksudhakar