ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಕರ್ವಿ, ಕನಿಷ್ಠ ಬಾಡಿ ಪ್ಯಾನೆಲಿಂಗ್‌ನಿಂದ, ಹೊಸ ಹೀರೋ ಡೆಸ್ಟಿನಿ ಫೇಸ್‌ಲಿಫ್ಟ್ ವೆಸ್ಪಾ ಮತ್ತು ಲ್ಯಾಂಬ್ರೆಟ್ಟಾ ಬ್ರಾಂಡ್‌ಗಳೊಂದಿಗೆ ಬಳಸುವ ವಿನ್ಯಾಸ ವಿಧಾನವನ್ನು ಅನುಸರಿಸಿದೆ. ಹೊಸ 2024 ಹೀರೋ ಡೆಸ್ಟಿನಿ 125 124.6cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದೆ. ಈ ಎಂಜಿನ್ 7,000rpm ನಲ್ಲಿ 9.1 bhp ಪವರ್ನ್ನು ಮತ್ತು 5,500rpm ನಲ್ಲಿ 10.4Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸದ್ಯಕ್ಕೆ, ಎಲ್ಲಾ ಮಾದರಿಗಳು 130 ಎಂಎಂ ಮುಂಭಾಗ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳನ್ನು ಕೂಡ ಹೊಂದಿವೆ.
#Hero #HeroDestini125 #DriveSparkKannada #HeroDestini125Review