ಚಾಲಕನ ನಿಯಂತ್ರಣ ತಪ್ಪಿ ಮಹಿಳೆಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ! ಭಯಾನಕ ದೃಶ್ಯ

ETVBHARAT 2025-05-23

Views 30

ಚಿಕ್ಕೋಡಿ: ಗೂಡ್ಸ್ ವಾಹನವೊಂದು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಸರಿತಾ ಮಾರುತಿ ಮಗದುಮ್ಮ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ನಿಪ್ಪಾಣಿ ಮತ್ತು ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮೂವರು ಮಹಿಳೆಯರ ಪೈಕಿ ಓರ್ವರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಗಾಯಾಳು ಸರಿತಾ ಮಾರುತಿ ಮಗದುಮ್ಮ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸರಿತಾ ಸೇರಿದಂತೆ ಮೂವರು ಜೊತೆಯಾಗಿ ಉಮರಾಣಿ ಗ್ರಾಮಕ್ಕೆ ಹೋಗುತ್ತಿರು. ಈ ವೇಳೆ ದಾರಿ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಮಹಿಳೆ ಗಾಳಿಯಲ್ಲಿ ತೇಲಿ ಕೆಳಗೆ ಬಿದ್ದಿದ್ದಾರೆ. ಇಬ್ಬರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಸ್ಕೂಟರ್​ಗೆ ಖಾಸಗಿ ಬಸ್ ಡಿಕ್ಕಿ- ತಾಯಿ, ಮಗ ಸಾವು; ತಂದೆ, ಮತ್ತೋರ್ವ ಮಗನಿಗೆ ಗಾಯ - SCOOTER PRIVATE BUS ACCIDENT

Share This Video


Download

  
Report form
RELATED VIDEOS