ಸಂಡೂರಿನ ನಾರಿಹಳ್ಳ ಅಣೆಕಟ್ಟು ಭರ್ತಿ, 4 ಗೇಟುಳಿಂದ ನೀರು ಬಿಡುಗಡೆ: ವಿಡಿಯೋ

ETVBHARAT 2025-08-06

Views 15

ಬಳ್ಳಾರಿ: ಜಿಲ್ಲೆಯ ಸಂಡೂರಿನ ನಾರಿಹಳ್ಳ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದೆ. ಮಂಗಳವಾರ ಸಂಜೆ ವೇಳೆಗೆ ಅಣೆಕಟ್ಟಿನ ನೀರಿನ ಮಟ್ಟ 810 ಟಿಎಂಪಿಸಿಗೆ ತಲುಪಿದ್ದು, ಇದು ಇದರ ಗರಿಷ್ಠ ಮಟ್ಟವಾಗಿದೆ. ಅಣೆಕಟ್ಟಿಯಲ್ಲಿ ಒಟ್ಟು ಐದು ಗೇಟುಗಳಿದ್ದು, ಇವುಗಳಲ್ಲಿ ನಾಲ್ಕು ಗೇಟುಗಳನ್ನು ತೆರೆಯಲಾಗಿದೆ. ಇದರಿಂದ ಪ್ರತಿ ಸೆಕೆಂಡ್‌ಗೆ ಸುಮಾರು 1,300 ಕ್ಯೂಸೆಕ್​ ನೀರು ಹೊರ ಹರಿಸಲಾಗುತ್ತಿದೆ. ಈ ನೀರು ನದಿಗಳ ಮೂಲಕ ಕೆಳಭಾಗದ ಪ್ರದೇಶಗಳಿಗೆ ಹರಿಯುತ್ತಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಅಣೆಕಟ್ಟಿಗೆ ನೀರು ಹರಿದುಬರುತ್ತಿರುವುದರಿಂದ ಗೇಟುಗಳ ಮೂಲಕ ನೀರ ಹೊರ ಬಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಆತಂಕ ಇರುವ ಕೆಳಭಾಗದ ಗ್ರಾಮಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಲಾಗಿದೆ. ಸ್ಥಳೀಯ ಆಡಳಿತ ಮತ್ತು ಎಸ್​ಡಿಆರ್​ಎಫ್​ ಪಡೆ ಅಗತ್ಯವಿದ್ದರೆ ಕಾರ್ಯಾಚರಣೆಗೆ ಸಜ್ಜಾಗಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ದೊಡ್ಡ ಕೆರೆ ಕೋಡಿ ಬಿದ್ದಿದೆ. ಇದೇ ಮೊದಲ ಬಾರಿಗೆ ಆಗಸ್ಟ್‌ ತಿಂಗಳಲ್ಲಿ ಕೆರೆ ಕೋಡಿ ಬಿದ್ದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋಡಿ ಬಿದ್ದಿರುವ ಕೆರೆ ವೀಕ್ಷಿಸಲು ಜನರು ಆಗಮಿಸುತ್ತಿದ್ದಾರೆ. ತಡರಾತ್ರಿ ಸುರಿದ ಭಾರೀ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಇದನ್ನೂ ಓದಿ: ಬೆಳ್ತಂಗಡಿ: ಶಿಶಿಲ ದೇವಸ್ಥಾನ ಜಲಾವೃತ, ಕಾರನ್ನು ಹಗ್ಗದಿಂದ ಮರಕ್ಕೆ ಕಟ್ಟಿದ ಸ್ಥಳೀಯರು

ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ ಹೊರಹರಿವು ಹೆಚ್ಚಳ: ನದಿಪಾತ್ರದ ಜನರಿಗೆ ಪ್ರವಾಹದ ಆತಂಕ

Share This Video


Download

  
Report form
RELATED VIDEOS