ಧಾರವಾಡ: ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ; ಎದುರಾಯ್ತು ಜನರಿಗೆ ಸಂಕಷ್ಟ

ETVBHARAT 2025-08-12

Views 27

ಧಾರವಾಡ : ಮಳೆಯ ಅಬ್ಬರದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ನಿರ್ಮಾಣ ಮಾಡಿದ್ದ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸೇತುವೆ ಕೊಚ್ಚಿಕೊಂಡು ಹೋಗಿದೆ. ನವಲಗುಂದ ತಾಲೂಕಿನ ಕೆಲ ಗ್ರಾಮಗಳು ಸೇರಿದಂತೆ ನವಲಗುಂದ, ನರಗುಂದ ಪಟ್ಟಣಗಳ ನಡುವಿನ ಸೇತುವೆ ಇದಾಗಿದ್ದು, ಸೇತುವೆ ಕುಸಿತದಿಂದ ಎರಡು ಪಟ್ಟಣಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. 

ಕಳೆದ ಒಂದು ತಿಂಗಳ ಹಿಂದಷ್ಟೇ ಸೇತುವೆ ದುರಸ್ತಿಯಾಗಿತ್ತು. ಈ ಮುಂಚೆಯೂ ಸೇತುವೆ ಇದೇ ರೀತಿ ಕೊಚ್ಚಿಕೊಂಡು ಹೋಗಿತ್ತು. ಕೊಚ್ಚಿ ಹೋದ ಸೇತುವೆಯಿಂದ ಜನರಿಗೆ ಸಂಕಷ್ಟ ಎದುರಾಗಿದ್ದು, ಈ ಸೇತುವೆಯನ್ನು ಬೆಣ್ಣಿಹಳ್ಳಕ್ಕೆ ನಿರ್ಮಿಸಲಾಗಿದೆ. ಅಲ್ಲದೇ, ಇನ್ನು ಮುಂದೆ ಕೊಚ್ಚಿ ಹೋಗೋದಿಲ್ಲ ಎಂದು ಅಧಿಕಾರಿಗಳ ಭರವಸೆ ನೀಡಿದ ಕೆಲ ದಿನಗಳಲ್ಲೇ ಕೊಚ್ಚಿಹೋಗಿದೆ. ಇದರೊಂದಿಗೆ ದುರಸ್ತಿ ಮಾಡಲು ಖರ್ಚು ಮಾಡಿದ ಹಣ ಸಹ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಹೊಲಗಳಿಗೆ ತೆರಳಲು ಸಮಸ್ಯೆ: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಸೇತುವೆಯ ಇನ್ನೊಂದು ಬದಿಯ ಹೊಲಗಳಿಗೆ ಹೋಗಲು ಕೂಡ ಸಮಸ್ಯೆಯಾಗಿದೆ. ಸೇತುವೆಯ ತುದಿಯಿಂದ ಕಷ್ಟಪಟ್ಟು ಜನರು ಸಾಗುತ್ತಿದ್ದಾರೆ. ಅಪಾಯವಿದ್ದರೂ ಅನಿವಾರ್ಯತೆಯಿಂದಾಗಿ ಹೊಲಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ :  ಗದಗ: ಭಾರಿ ಮಳೆಯಿಂದಾಗಿ ಕಟಾವಿಗೆ ಬಂದ ಹೆಸರು ಬೆಳೆಗೆ ಕಂಟಕ - CROP DAMAGE

Share This Video


Download

  
Report form
RELATED VIDEOS