ಕಬ್ಬಿನ ಆಸೆಗೆ ಲಾರಿ ಹತ್ತಲು ಮುಂದಾದ ಕಾಡಾನೆ:‌ ಗಾಜು ಪುಡಿಪುಡಿ-ವಿಡಿಯೊ

ETVBHARAT 2025-08-22

Views 2.1K

ಚಾಮರಾಜನಗರ(ಆಸನೂರು): ಕಬ್ಬಿನ ಆಸೆಗೆ ರಸ್ತೆಗಿಳಿದ ಕಾಡಾನೆಯೊಂದು ಎದುರಿಗೆ ಬಂದ ಲಾರಿ ಹತ್ತಲು ಮುಂದಾಗಿ, ಕಬ್ಬು ಕಿತ್ತುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಆಸನೂರು ಸಮೀಪ ನಡೆದಿದೆ.

ಕಾಡಾನೆ ಲಾರಿಯನ್ನು ತಡೆದು ಅದರ ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದೆ. ಆನೆ ಕೊನೆಗೂ ಒಂದು ಕಂತೆ ಕಬ್ಬನ್ನು ಎಳೆದೊಯ್ದಿದೆ. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿ ನಿರಂತರವಾಗಿ ಕಾಡಾನೆ ಓಡಾಡುತ್ತಿದ್ದು, ರಸ್ತೆ ಬದಿ ಬಂದು ನಿಂತು ಕಬ್ಬು ವಸೂಲಿ ಮಾಡುತ್ತಿದೆ. ಇತರೆ ವಾಹನಗಳಗತ್ತ ಕಣ್ಣೆತ್ತಿಯೂ ನೋಡದ ಕಾಡಾನೆ ಕಬ್ಬು ಹಾಗೂ ತರಕಾರಿ ತುಂಬಿದ ವಾಹನಗಳನ್ನೇ ಆಯ್ಕೆ ಮಾಡುತ್ತಿದ್ದು, ಲಾರಿ ಚಾಲಕರು ಹೈರಾಣಾಗಿದ್ದಾರೆ.

ಇತ್ತೀಚಿನ ಘಟನೆ: ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಆಹಾರಕ್ಕಾಗಿ ರಸ್ತೆಗಿಳಿದಿದ್ದ ಕಾಡಾನೆಯ ಫೋಟೋ ತೆಗೆಯಲು ವಾಹನದಿಂದ ಇಳಿದ ವ್ಯಕ್ತಿಯನ್ನು ಆನೆ ತುಳಿಯಲು ಯತ್ನಿಸಿತ್ತು. ಅದೃಷ್ಟವಶಾತ್ ವ್ಯಕ್ತಿ​ ಪಾರಾಗಿದ್ದು, ಅರಣ್ಯ ಇಲಾಖೆ ಆತನಿಗೆ 25 ಸಾವಿರ ರೂಪಾಯಿ ದಂಡ ಹಾಕಿದೆ. ಆಗಸ್ಟ್​ 10ರಂದು ಚಾಮರಾಜನಗರದಲ್ಲಿ ಈ ಘಟನೆ ನಡೆದಿತ್ತು. 

ಇದನ್ನೂ ಓದಿ: ಬಂಡೀಪುರದಲ್ಲಿ ಆನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋದ ವ್ಯಕ್ತಿಗೆ 25 ಸಾವಿರ ರೂಪಾಯಿ ದಂಡ

Share This Video


Download

  
Report form
RELATED VIDEOS