ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

ETVBHARAT 2025-08-24

Views 16

ತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ ಮಾದರಿಯ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪೇಟೆ ತೊಟ್ಟಿರುವ ಗಣಪತಿ ವಿಗ್ರಹ, ಆಸ್ಥಾನದಲ್ಲಿ ಕುಳಿತ ಭಂಗಿಯ ಗಣೇಶ, ಕೈ ಎತ್ತಿ ನೃತ್ಯ ಮಾಡುವ ಗಣೇಶನ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ.

ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿರುವುದು ಗಮನಿಸಬೇಕಾದ ಅಂಶ. ಈ ಮೊದಲು ಆಯಿಲ್‌ ಪೈಂಟ್​ಗಳನ್ನು ಬಳಸಲಾಗುತ್ತಿತ್ತು. ಇದರಿಂದ ವಿಸರ್ಜನೆ ವೇಳೆ ಕೆರೆ ನೀರು ಕಲುಷಿತಗೊಳ್ಳುತ್ತಿತ್ತು. ಇದನ್ನು ಮನಗಂಡಿರುವ ತಯಾರಕರು ಸ್ವಯಂಪ್ರೇರಿತರಾಗಿ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ವಿಗ್ರಹಗಳು ಸುಂದರವಾಗಿ ಕಾಣುತ್ತಿವೆ ಎನ್ನುತ್ತಾರೆ ವಿಗ್ರಹ ತಯಾರಕರು ಮತ್ತು ಮಾರಾಟಗಾರರು.

ಇದನ್ನೂ ಓದಿ: ಗೋವಿನಜೋಳದ ನುಚ್ಚಿನಲ್ಲಿ ಅರಳಿದ ಗಣೇಶನ ಮೂರ್ತಿ: ಕುಂದಾನಗರಿ ಕಲಾವಿದನ ವಿಶಿಷ್ಟ ಪ್ರಯೋಗ

ಇದನ್ನೂ ಓದಿ: "ಒಂದು ಊರು ಒಂದೇ ಗಣಪ": ಏಕತೆ ಸಂದೇಶ ಸಾರುತ್ತಿರುವ ನಂದಗಡ ಗ್ರಾಮದ ಗಣೇಶ ಚತುರ್ಥಿಯ ಇತಿಹಾಸವೇ ವಿಭಿನ್ನ

ಇದನ್ನೂ ಓದಿ: ಚತುರ್ಥಿ 2025: ಮಾರುಕಟ್ಟೆಗಳಲ್ಲಿ ವಿನ್ಯಾಸಭರಿತ ಗಣೇಶ ಮೂರ್ತಿಗಳ ಮಾರಾಟ ಜೋರು

Share This Video


Download

  
Report form
RELATED VIDEOS