ಉಡುಪಿ: ಸಿಸಿಟಿವಿಗೆ ಸ್ಪ್ರೇ ಬಳಿದು ₹95 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, ನಗದು ಕಳ್ಳತನ

ETVBHARAT 2025-09-10

Views 68

ಉಡುಪಿ: ನಗರದ ಚಿತ್ತರಂಜನ್​​​​​ ಸರ್ಕಲ್​​​​​​​ ಬಳಿಯ ಜ್ಯುವೆಲರಿ ವರ್ಕ್​​​ ಶಾಪ್​ನಲ್ಲಿ ಸೆ.8ರ ತಡರಾತ್ರಿ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದಾರೆ. ವೈಭವ್​​ ಮೋಹನ ಘಾಟಗೆ ಅವರ ಮಾಲಿಕತ್ವದ ಚಿನ್ನ ಮತ್ತು ಬೆಳ್ಳಿ ಕರಗಿಸುವ 'ವೈಭವ್​ ರಿಫೈನ‌ರ್​' ಎಂಬ ಅಂಗಡಿಗೆ ನಕಲಿ ಬೀಗ ಬಳಸಿ ಒಳನುಗ್ಗಿದ ಕಳ್ಳರು, ಡ್ರಾಯರ್​​​ನಲ್ಲಿದ್ದ ಅಂದಾಜು 65,96,000 ರೂ. ಮೌಲ್ಯದ 680 ಗ್ರಾಂ ಚಿನ್ನ, 22,00,000 ರೂ. ಮೌಲ್ಯದ 200 ಗ್ರಾಂ ಚಿನ್ನ, ರಿಫೈನ್‌ ಮಾಡಿದ್ದ ಸುಮಾರು 6,25,000 ರೂ. ಮೌಲ್ಯದ 5 ಕೆ.ಜಿ. ತೂಕದ ಬೆಳ್ಳಿಯ ಸಣ್ಣಸಣ್ಣ ಗಟ್ಟಿಗಳು ಮತ್ತು ನಗದು 1,50,000 ರೂ. ಸೇರಿ ಒಟ್ಟಾರೆ 95,71,000 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಅಂಗಡಿ ಮಾಲೀಕರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಿಸಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿದ ಕಳ್ಳರು: ಕಳ್ಳರು ಕೃತ್ಯಕ್ಕೂ ಮುನ್ನ‌ ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಓರ್ವ ಕಳ್ಳ ಸಿಸಿ ಕ್ಯಾಮೆರಾಗೆ ಸ್ಪ್ರೇ ಎರಚುತ್ತಿರುವ ದೃಶ್ಯ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆ: ವೃದ್ಧ ದಂಪತಿಯ ಕೈ-ಕಾಲು ಕಟ್ಟಿ ಹಾಕಿ ಪುತ್ರನ ವಿವಾಹದ ಒಡವೆ ಕದ್ದ ಕಳ್ಳರ ಗುಂಪು

Share This Video


Download

  
Report form
RELATED VIDEOS