ದಾವಣಗೆರೆ: ನಗರದ ಎರಡು ರೈಸ್​ ಮಿಲ್​​ಗಳಲ್ಲಿ ಕಾಣಿಕೊಂಡ ಹಾವುಗಳು; ಸ್ನೇಕ್ ಬಸವರಾಜ್​ರಿಂದ ರಕ್ಷಣೆ

ETVBHARAT 2025-10-06

Views 95

ದಾವಣಗೆರೆ: ರೈಸ್ ಮಿಲ್​ಗಳಲ್ಲಿ ಕಾಣಿಸಿಕೊಂಡ ಎರಡು ಹಾವುಗಳನ್ನು ಕಂಡು ಕಾರ್ಮಿಕರು ಭಯಭೀತರಾದ ಘಟನೆ ನಗರದ ಮಟ್ಟಿಕಲ್ ಹಾಗೂ ಅಣ್ಣ ನಗರದ ರೈಸ್ ಮಿಲ್​​ಗಳಲ್ಲಿ ನಡೆದಿದೆ. ಈ ಎರಡು ಹಾವುಗಳನ್ನು ಸ್ನೇಕ್ ಬಸವರಾಜ್​ ಅವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.   

ಅಣ್ಣ ನಗರದಲ್ಲಿರುವ ರೈಸ್ ಮಿಲ್​ಗೆ 7 ಅಡಿ ಉದ್ದದ ಒಂದು ಕೆರೆಹಾವು ಬಂದಿತ್ತು. ಇನ್ನೊಂದೆಡೆ ನಗರದ ಮಟ್ಟಿಕಲ್​​ನಲ್ಲಿರುವ ದಾವಣಗೆರೆ ಉಸ್ತುವಾರಿ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್ ಅವರ ಒಡೆತನದ ಕಲ್ಲೇಶ್ವರ ರೈಸ್ ಮಿಲ್ ಗೆ ಐದು ಅಡಿ ಉದ್ದದ ಗೋದಿ ಬಣ್ಣದ ನಾಗರಹಾವು ಆಗಮಿಸಿತ್ತು.‌ ವಿಷಯ ತಿಳಿಯುತ್ತಿದ್ದಂತೆ ಸ್ನೇಕ್ ಬಸವರಾಜ್ ಅವರು ಸ್ಥಳಕ್ಕೆ ಬಂದು ಅವುಗಳನ್ನು ರಕ್ಷಿಸಿದ್ದಾರೆ. 

ಈ ಕುರಿತು ಸ್ನೇಕ್ ಬಸವರಾಜ್ ಅವರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, 'ಅಣ್ಣ ನಗರದ ರೈಸ್ ಮಿಲ್​​ವೊಂದರಲ್ಲಿ ಏಳು ಅಡಿ ಉದ್ದದ ಕೆರೆ ಹಾವು ರಕ್ಷಣೆ ಮಾಡಿದ್ದೇನೆ. ಮತ್ತೊಂದೆಡೆ ಸಚಿವರಾದಂತಹ ಎಸ್. ಎಸ್​ ಮಲ್ಲಿಕಾರ್ಜುನ್ ಅವರ ಕಲ್ಲೇಶ್ವರ ರೈಸ್‌ ಮಿಲ್​​ನಲ್ಲಿ ಐದು ಅಡಿ ಉದ್ದದ ನಾಗರಹಾವು ರಕ್ಷಣೆ ಮಾಡಿದ್ದೇನೆ. ಕೆರೆ ಹಾವು ಬೃಹತ್ ಆಕಾರವಾಗಿದೆ. ಬರೋಬ್ಬರಿ ಏಳು ಅಡಿ ಹಾವು ಇದ್ದು, ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು. ಸದ್ಯ ಎರಡೂ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದೇನೆ' ಎಂದು ತಿಳಿಸಿದ್ದಾರೆ. 

Share This Video


Download

  
Report form
RELATED VIDEOS