ಚಲಿಸುತ್ತಿದ್ದ KSRTC ಬಸ್‌ ಸ್ಟೇರಿಂಗ್ ಕಟ್: ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETVBHARAT 2025-10-08

Views 26

ಚಿಕ್ಕಮಗಳೂರು: ಸ್ಟೇರಿಂಗ್ ಕಟ್ಟಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ ಅಪಘಾತಕ್ಕೀಡಾದ ಘಟನೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ತಾಲೂಕು ಪಂಚಾಯಿತಿ ಮುಂಭಾಗ ನಡೆದಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಚಿಕ್ಕಮಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ ನಿಲ್ದಾಣದಿಂದ ತುಸು ದೂರ ಬರುತ್ತಿದ್ದಂತೆ ಸ್ಟೇರಿಂಗ್ ಕಟ್ಟಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಹಿಂದಿನ ಚಕ್ರ ನೆಲದಿಂದ ಸುಮಾರು ಎರಡು ಅಡಿ ಎತ್ತರಕ್ಕೆ ಹಾರಿ ಬಸ್​ ರಸ್ತೆಗೆ ಅಡ್ಡಲಾಗಿ ನಿಂತಿದೆ. ಸಿಟಿ ಲಿಮಿಟ್ಸ್ ಆಗಿದ್ದರಿಂದ ಹಿಂದೆ ಬರುತ್ತಿದ್ದ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ಭಾರಿ ಅನಾಹುತ ತಪ್ಪಿದೆ. 

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ. ಬಸ್ ಟ್ರಾನ್ಸ್​ಫಾರ್ಮರ್​ ಕಂಬದ ಪಕ್ಕಕ್ಕೆ ಬಂದು ನಿಂತಿದೆ. ಒಂದು ವೇಳೆ ಬಸ್ ಟ್ರಾನ್ಸ್​ಫಾರ್ಮರ್​ ಕಂಬಕ್ಕೆ ಡಿಕ್ಕಿಯಾಗಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್​ ದುರ್ಘಟನೆ ಸಂಭವಿಸಿಲ್ಲ. ಆದರೆ, ಸಿಸಿಟಿವಿ ದೃಶ್ಯ ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ. ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನಿಂತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ವಾಹನ: ಅದೃಷ್ಟವಶಾತ್ ತಪ್ಪಿದ ಅನಾಹುತ : ವಿಡಿಯೋ

ಇದನ್ನೂ ಓದಿ: ಹಳ್ಳಕ್ಕೆ ಬಿದ್ದ ಬಸ್, ಅದೃಷ್ಟವಶಾತ್ ತಪ್ಪಿದ ಅನಾಹುತ: ವಿಡಿಯೋ

Share This Video


Download

  
Report form
RELATED VIDEOS