ನಾನು ರಾಜಕಾರಿಣಿ, ಸನ್ಯಾಸಿ ಅಲ್ಲ: ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ಹೊರಹಾಕಿದ ಲಕ್ಷ್ಮಣ್​​​ ಸವದಿ

ETVBHARAT 2025-11-21

Views 64

ಚಿಕ್ಕೋಡಿ(ಬೆಳಗಾವಿ): "ನಾನು ಒಬ್ಬ ರಾಜಕಾರಣಿ, ಸನ್ಯಾಸಿ ಅಲ್ಲವೇ ಅಲ್ಲ, ಹೀಗಾಗಿ ನನಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್​​​​​ ಹಾಗೂ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು" ಎಂದು ಶಾಸಕ ಲಕ್ಷ್ಮಣ್​​​ ಸವದಿ ಪರೋಕ್ಷವಾಗಿ ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು.

ಶಾಸಕ ಲಕ್ಷ್ಮಣ್​​​​​ ಸವದಿ ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ನನಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್​ ಮತ್ತು ಮುಖ್ಯಮಂತ್ರಿಗಳು ಕೂಡಿ ಚರ್ಚೆ ಮಾಡಿದ ಮೇಲೆ ತೀರ್ಮಾನವಾಗಲಿದೆ. ಬಹುತೇಕ ನನಗೆ ಇರುವ ಮಾಹಿತಿ ಪ್ರಕಾರ, ಬೆಳಗಾವಿ ಅಧಿವೇಶನ ಮುಗಿಯುವವರೆಗೆ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂಬುದು ನನ್ನ ಅನಿಸಿಕೆ" ಎಂದರು.

"ನಾನು ಸಚಿವ ಸ್ಥಾನ ಬಗ್ಗೆ ಯಾವತ್ತೂ ಚಿಂತನೆ ಮಾಡಿಲ್ಲ, ಹೈಕಮಾಂಡ್​​​ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಬಹಳಷ್ಟು ಶಾಸಕರಿಗೆ ಮಂತ್ರಿ ಸ್ಥಾನದ ಅಪೇಕ್ಷೆ ಇರುತ್ತದೆ. ನಾನಂತೂ ಸನ್ಯಾಸಿ ಅಂತೂ ಅಲ್ಲ, ನಾನು ಒಬ್ಬ ರಾಜಕಾರಣಿ, ಪ್ರತಿಯೊಬ್ಬ ರಾಜಕಾರಣಿಗೂ ಕೂಡ ಅಪೇಕ್ಷೆಗಳು ಇದ್ದೇ ಇರುತ್ತವೆ" ಎಂದು ಸವದಿ ಹೇಳಿದರು.

"ಜನವರಿ ತಿಂಗಳಿನಲ್ಲಿ ಶುಕ್ರದೆಸೆ ಪ್ರಾರಂಭವಾಗುತ್ತದೆ" ಎಂಬ ಹೇಳಿಕೆ ಸವದಿ ಮಾತನಾಡಿ, "ನಾನು ಅದನ್ನು ನಾನು ಯಾವ ಅರ್ಥದಲ್ಲಿ ಹೇಳಿದ್ದೀನಿ ಮುಂದೆ ಒಂದು ದಿನ ನಿಮಗೆ ಅರ್ಥ ಆಗುತ್ತದೆ. ಸಂದರ್ಭವೇ ತಮಗೆ ಅನುಭವಕ್ಕೆ ಬರುತ್ತದೆ. ಶುಕ್ರದೆಸೆ ಎಂಬುವುದು ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಇರಬಹುದು, ಏನೋ ಒಂದು ಚಿಂತನೆಯನ್ನು ಮಾಡಿ ನಾವು ಹೇಳಿರ್ತೀವಿ ಎಂದು ಸವದಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: 'ನವೆಂಬರ್ ಕ್ರಾಂತಿ'ಗೆ ಮುನ್ನುಡಿ?: ಅತ್ತ ಡಿಕೆಶಿ ಆಪ್ತರ ದೆಹಲಿ ಪರೇಡ್, ಇತ್ತ ಸಿಎಂ ಆಪ್ತರ ಡಿನ್ನರ್ ಮೀಟಿಂಗ್!

Share This Video


Download

  
Report form
RELATED VIDEOS