ನಾವಿವತ್ತು ನಿಮಗೆ ಹೇಳ್ತಾ ಇರೋ ಕತೆ ಇದ್ಯಲ್ಲಾ, ಅದು ನಿಜಕ್ಕೂ ಬೆಚ್ಚಿಬೀಳಿಸುವಂಥದ್ದು.. ಇದನ್ನ ಕೇಳಿದ್ರೆ, ಭಯವಾಗೋದಕ್ಕಿಂತಾ ಹೆಚ್ಚಾಗಿ, ನಮ್ಮ ಸುತ್ತಲೂ ಇರೋ ಜಗತ್ತಲ್ಲಿ ಇಷ್ಟೆಲ್ಲಾ ನಡೀತಿದ್ಯಾ ಅಂತ ಆಘಾತ-ಆಶ್ಚರ್ಯ ಎರಡೂ ಆಗುತ್ತೆ.. ಪ್ರಪಂಚದಲ್ಲಿ ದುಡ್ಡಿದ್ದರೆ ಏನು ಬೇಕಾದರೂ ಮಾಡಬೋದು ಅಂತಾರೆ.. ಆದರೆ ಆ ದುಡ್ಡು ಮತ್ತು ಅಧಿಕಾರದ ಮದ ನೆತ್ತಿಗೇರಿದರೆ ಮನುಷ್ಯ ಎಷ್ಟರ ಮಟ್ಟಿಗೆ ಕೆಳಜಾರಬಹುದು ಅನ್ನೋದಕ್ಕೆ ಇಲ್ಲೊಂದು ಬೆಚ್ಚಿಬೀಳಿಸೋ ಉದಾಹರಣೆಯಿದೆ.