Deepika Padukone First Crush | Oneindia Kannada

Filmibeat Kannada 2017-07-03

Views 3

Deepika Padukone had a crush on Hollywood actor Leonardo Dicaprio and she had posters of him and his films stuck on her wall. Not just her, but sister Anisha also had a crush on the same actor and the two bonded over their mutual admiration of him.

ದೀಪಿಕಾ ಪಡುಕೋಣೆ ಅಂದ್ರೆ ಪಡ್ಡೆ ಹುಡುಗರು ನಿದ್ದೆಯಲ್ಲಿ ಕೂಡ ಕನವರಿಸುತ್ತಾರೆ. ಅದೇಷ್ಟೋ ಯುವಕರಿಗೆ ದೀಪಿಕಾ ಮೇಲೆ ಕ್ರಶ್ ಆಗಿರುತ್ತೆ ಅಂದ್ರೆ ನಂಬಲೇಬೇಕು. ಆದ್ರೆ, ದೀಪಿಕಾ ಪಡುಕೋಣೆಗೆ ಚಿಕ್ಕ ವಯಸ್ಸಿನಲ್ಲಿ ಯಾರ ಮೇಲೆ ಕ್ರಶ್ ಆಗಿತ್ತು ಅಂತ ಗೊತ್ತಾ? ದೀಪಿಕಾ ಪಡುಕೋಣೆಗೆ ತಮ್ಮ ಮೊದಲ ಕ್ರಶ್ ಹಾಲಿವುಡ್ ನ ನಟನ ಮೇಲಾಗಿತ್ತಂತೆ. ಹಾಲಿವುಡ್ ನಟ ಅಂದಾಕ್ಷಣ 'XXX: Return of Xander Cage' ಚಿತ್ರದ ನಾಯಕ ವಿನ್ ಡೀಸೆಲ್ ಎಂದುಕೊಳ್ಳಬೇಡಿ. 'ಟೈಟಾನಿಕ್' ಹೀರೋ 'ಲಿಯನಾರ್ಡೊ ಡಿಕಾಪ್ರಿಯೊ' ಅವರ ಮೇಲೆ ಡಿಪ್ಪಿಗೆ ಕ್ರಶ್ ಆಗಿತ್ತಂತೆ.

ಈ ವಿಷ್ಯವನ್ನ ಸ್ವತಃ ದೀಪಿಕಾ ಪಡುಕೋಣೆ ತಮ್ಮ 'Instagram'ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾಗೆ 12 ವರ್ಷವಿರುವಾಗ ಸಹೋದರಿ ಅನುಷಾ ಜೊತೆ ಕೂತಿರುವ ಫೋಟೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ದೀಪಿಕಾ ಮತ್ತು ಸಹೋದರಿ ಬೆನ್ನ ಹಿಂದಿನ ಗೋಡೆಯಲ್ಲಿ 'ಟೈಟಾನಿಕ್' ನಾಯಕ 'ಲಿಯನಾರ್ಡೊ ಡಿಕಾಪ್ರಿಯೊ' ಅವರ ಭಾವಚಿತ್ರಗಳನ್ನ ಹಾಕಲಾಗಿದೆ.

ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ದೀಪಿಕಾ ಸಹೋದರಿ ಅನುಷಾಗೂ 'ಟೈಟಾನಿಕ್' ಹೀರೋ 'ಲಿಯನಾರ್ಡೊ ಡಿಕಾಪ್ರಿಯೊ' ಅವರ ಮೇಲೆ ಕ್ರಶ್ ಆಗಿತ್ತಂತೆ. ಈ ಮೂಲಕ, ಸಹೋದರಿಯರಿಬ್ಬರು ಒಂದೇ ನಟನನ್ನ ಇಷ್ಟಪಡುತ್ತಿದ್ದರಂತೆ. ಇನ್ನು ಈ ಪೋಸ್ಟ್ 5 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಕೂಡ ಬಂದಿದ್ದು, ದೀಪಿಕಾ ಅವರ ಬಾಯ್ ಫ್ರೆಂಡ್ ರಣ್ವೀರ್ ಸಿಂಗ್ ಕೂಡ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.



Share This Video


Download

  
Report form
RELATED VIDEOS