After a huge support for #nammametrohindibeda campaign in Bengaluru, Hindi signage boards have been masked in Kempegowda interchange metro station and Chickpet station of Namma metro.
ಕೊನೆಗೂ ಬೆಂಗಳೂರಿಗರ, ಅದರಲ್ಲೂ ಕನ್ನಡ ಪ್ರೇಮಿಗಳ ಹೋರಾಟಕ್ಕೆ ಜಯಲಭಿಸಿದೆ. 'ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಬೇಡ' ಆಂದೋಲನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕ ಅಭೂತಪೂರ್ವ ಬೆಂಬಲ ಬಿಎಂಆರ್ ಸಿ ಎಲ್(ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಶನ್ ಲಿಮಿಟೆಡ್) ಅಧಿಕಾರಿಗಳನ್ನೂ ನಡುಗಿಸಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಕೆಂಪೇಗೌಡ ಇಂಟರ್ ಚೇಂಜ್ (ಮೆಜೆಸ್ಟಿಕ್) ಮೆಟ್ರೋ ಸ್ಟೇಶನ್ ಮತ್ತು ಗ್ರೀನ್ ಲೈನ್ ನ 'ಚಿಕ್ಕಪೇಟೆ ಮೆಟ್ರೋ ನಿಲ್ದಾಣ'ಗಳಲ್ಲಿ ಹಾಕಲಾಗಿದ್ದ ಬೋರ್ಡ್ ನಲ್ಲಿದ್ದ ಹಿಂದಿ ವಾಕ್ಯಗಳನ್ನು ಬಿಎಂಆರ್ ಸಿಎಲ್ ಅಳಿಸಿಹಾಕಿದೆ! ' ಈ ಬೋರ್ಡ್ ಗಳಲ್ಲಿ ಹಿಂದಿ ಅಳಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡಪರ ಹೋರಾಟಗಾರರು ಬೆದರಿಕೆ ಹಾಕಿದ್ದರ ಪರಿಣಾಮ ಇದು!