Shwetha Srivatsav Enjoing Her Motherhood Days | Filmibeat Kannada

Filmibeat Kannada 2017-07-03

Views 8

Kannada Actress Shwetha Srivatsav Enjoying Her Pregnancy Time by getting Belly Painting done.

ನಟಿ ಶ್ವೇತಾ ಶ್ರೀವಾತ್ಸವ್ ಈಗ ತುಂಬು ಗರ್ಭಿಣಿ. ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಫೋಟೋಶೂಟ್ ಮಾಡಿಸಿ, ಎಲ್ಲರ ಗಮನ ಸೆಳೆದಿದ್ದ ಶ್ವೇತಾ ಶ್ರೀವಾತ್ಸವ್ ಈಗ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ತಮ್ಮ ಹೊಟ್ಟೆಯ ಮೇಲೆ ಮಗುವಿನ ಚಿತ್ರ ಬರೆಸಿಕೊಂಡು ಆನಂದ ಪಟ್ಟಿದ್ದಾರೆ. ಗರ್ಭ ಧರಿಸಿದ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಸಿನಿಮಾ ನಟಿಯರಂತೂ ಪ್ರೆಗ್ನೆನ್ಸಿ ಸಮಯದಲ್ಲಿ ಯಾರ ಕಣ್ಣಿಗೂ ಬೀಳುವುದಿಲ್ಲ. ಆದರೆ ನಟಿ ಶ್ವೇತಾ ಹಾಗಿಲ್ಲ. ತಾವು ಗರ್ಭಿಣಿ ಆದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದರು.


ಸದ್ಯ 9 ತಿಂಗಳು ತುಂಬಿರುವ ಶ್ವೇತಾ ಈಗ ತಮ್ಮ ಹೊಟ್ಟೆಯ ಮೇಲೆ ಮಗುವಿನ ಚಿತ್ರ ಬರೆಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದ ಐಡಿಯಾ ಶ್ವೇತ ಅವರ ಪತಿ ಅಮಿತ್ ಅವರದು. ಬಾದಲ್ ನಂಜುಂಡ ಸ್ವಾಮಿ ಎಂಬುವವರು ಈ ಚಿತ್ರವನ್ನು ಆರು ಗಂಟೆಗಳ ಕಾಲ ಬಿಡಿಸಿದ್ದಾರೆ. ಮಗುವಿನ ಚಿತ್ರ ಬರೆಸಿಕೊಂಡ ಶ್ವೇತಾ ತಮ್ಮ ತಾಯ್ತನದ ಆನಂದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Share This Video


Download

  
Report form
RELATED VIDEOS