Sandalwood stars like Sudeep, Puneeth Rajkumar, V Ravichandran, Rachita Ram are now busy in reality shows.
ಕಿರುತೆರೆಯತ್ತ ಮುಖ ಮಾಡಿದ ಸ್ಯಾಂಡಲ್ ವುಡ್ ನ 'ನಕ್ಷತ್ರ'ಗಳು. ಇಷ್ಟು ದಿನ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದ ಚಂದನವನದ ನಕ್ಷತ್ರಗಳು ಇದೀಗ ವಾರಾಂತ್ಯದಲ್ಲಿ ರಾತ್ರಿ ಹೊತ್ತಿನಲ್ಲಿ ಕಿರುತೆರೆಯಲ್ಲಿ ಮಾತ್ರ ಮಿಂಚಲಿವೆ. ಬಿಗ್ ಸ್ಕ್ರೀನ್ ಮೇಲೆ ಪ್ರೇಕ್ಷಕರನ್ನ ರಂಜಿಸಿದ ಅನೇಕರು ಈಗ ಸ್ಮಾಲ್ ಸ್ಕ್ರೀನ್ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲಾ ಸ್ಟಾರ್ ಕಲಾವಿದರು ರಿಯಾಲಿಟಿ ಶೋಗಳ ಮೂಲಕ ಮನೆ ಮನೆಗೆ ತಲುಪಿದ್ದಾರೆ. ವಾರಾಂತ್ಯ ಆಯ್ತು ಅಂದ್ರೆ ಸಾಕು ಸುದೀಪ್ ರನ್ನ ನೋಡಲು ಸಿನಿಮಾ ಥಿಯೇಟರ್ ಗೆ ಹೋಗುವ ಅವಶ್ಯಕತೆ ಇಲ್ಲ. ಯಾಕಂದ್ರೆ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಸುದೀಪ್ ಪ್ರತಿ ಮನೆಯ ಟಿವಿಯಲ್ಲಿ ಬರ್ತಾರೆ. ಸುದೀಪ್ ಇನ್ನೂ ಎಂಟು ವಾರಗಳ ಕಾಲ ಹೀಗೆ ನಿಮ್ಮನ್ನ ರಂಜಿಸಲಿದ್ದಾರೆ.