An audio clip recorded by an employee, who was asked to quit immediately or get terminated as part of company's optimization program, has gone viral on social media. The tech company CEO has apologized later for the way the employees were terminated.
ಹಲವಾರು ಕಂಪನಿಗಳಲ್ಲಿ ಖರ್ಚುವೆಚ್ಚ ತಗ್ಗಿಸುವ ನೆಪದಲ್ಲಿ ಹೋಲ್ ಸೇಲ್ ಆಗಿ ಉದ್ಯೋಗಿಗಳಿಂದ ರಾಜೀನಾಮೆ ಪಡೆಯಲಾಗುತ್ತಿದೆ. ಕೆಲವು ಕಂಪನಿಗಳು ಇದನ್ನು ಅಲ್ಲಗಳೆಯುತ್ತಿವೆಯಾದರೂ, ಓರ್ವ ಜಾಣ ಉದ್ಯೋಗಿ ಇಂಥ ಕಂಪನಿಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬುದನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ಹೀಗೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಒಂದು ಆಡಿಯೋ ತುಣುಕು ಆ 'ಟೆಕ್' ಕಂಪನಿಯ ಹುಳುಕು ಮತ್ತು ಬಂಡವಾಳವನ್ನು ಬಯಲು ಮಾಡಿದೆ. ಈ ಆಡಿಯೋ ಈಗ ಎಲ್ಲೆಲ್ಲೂ ವೈರಲ್ ಆಗಿದ್ದು, ಉದ್ಯೋಗಿಗಳನ್ನು ಕಂಪನಿಗಳು ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು ಹೊರಹಾಕಿದೆ.