Puneeth Rajkumar and Rashmika Mandanna-starrer Anjaniputra having completed 80 per cent of the shoot, the team will head to Rajasthan for few more scenes will be shot.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಕಿರಿಕ್' ಬೆಡಗಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಅಂಜನಿಪುತ್ರ'ದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹರ್ಷ.ಎ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ದೊಡ್ಡ ತಾರಬಳಗವನ್ನ ಚಿತ್ರದಲ್ಲಿ ನೋಡಬಹುದು. ಸದ್ಯ ಬಹುಭಾಷಾ ನಟಿ ರಮ್ಯಾಕೃಷ್ಣ ಚಿತ್ರತಂಡವನ್ನ ಸೇರಿಕೊಂಡಿದ್ದು, ಇತ್ತಿಚೇಗಷ್ಟೇ ರಮ್ಯಾಕೃಷ್ಣ ಅವರ ಭಾಗದ ಶೂಟಿಂಗ್ ನಡೆದಿದೆ. ಶೇಕಡಾ 80 ರಷ್ಟು ಚಿತ್ರೀಕರಣ ಮುಗಿಸಿರುವ 'ಅಂಜನಿಪುತ್ರ' ಕ್ಲೈಮ್ಯಾಕ್ಸ್ ಗಾಗಿ ಹೊರರಾಜ್ಯಕ್ಕೆ ಜಿಗಿದಿದೆ.