ನಟ ದಿಗಂತ್ ಮತ್ತು ಐಂದ್ರಿತಾ ರೇ ಮದುವೆ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಆದರೆ ಈ ವಿಷಯದ ಬಗ್ಗೆ ಇದೀಗ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ದಿಗಂತ್ ಮತ್ತು ಐಂದ್ರಿತಾ ಮದುವೆ ಸುದ್ದಿ ಹರಿದಾಡಿತ್ತು. ದಿಗಂತ್ ಮತ್ತು ಐಂದ್ರಿತಾ ಮದುವೆ ಮುಂದಿನ ವರ್ಷ ನಡೆಯಲಿದೆ ಎಂದು ಕೆಲವು ದಿನಪತ್ರಿಕೆಗಳು ವರದಿ ಮಾಡಿವೆ. ಜೊತೆಗೆ ದಿಗಂತ್ ಅವರೇ ಐಂದ್ರಿತಾ ಜೊತೆ ಮದುವೆಯಾಗುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಟಿ ಐಂದ್ರಿತಾ ಟ್ವಿಟ್ಟರ್ ಖಾತೆಯ ಮೂಲಕ ಪರೋಕ್ಷವಾಗಿ ಉತ್ತರಿಸಿದ್ದಾರೆ.
ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಇಬ್ಬರು ಮುಂದಿನ ವರ್ಷ ಮದುವೆಯಾಗುತ್ತಾರೆ. ಈ ಬಗ್ಗೆ ಸ್ವತಃ ದಿಗಂತ್ ಸ್ಪಷ್ಟಪಡಿಸಿದ್ದು, ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ'' ಎನ್ನುವ ಸುದ್ದಿ ಇದೀಗ ಕೇಳಿಬಂದಿದೆ.ಐಂದ್ರಿತಾ ತಾವು ನೇರವಾಗಿ ಮದುವೆ ಸುದ್ದಿ ಬಗ್ಗೆ ಏನು ಹೇಳಿಲ್ಲ. ಆದರೆ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಟ್ವೀಟ್ ಅನ್ನು ತಾವು ರೀ-ಟ್ವೀಟ್ ಮಾಡುವ ಮೂಲಕ ಇದು 'ಸುಳ್ಳು ಸುದ್ದಿ' ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.ಮದುವೆ ಬಗ್ಗೆ ಐಂದ್ರಿತಾ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ದಿಗಂತ್ ಮಾತ್ರ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಇದುವರೆಗೆ ಯಾವುದೇ ರಿಯಾಕ್ಷನ್ ನೀಡಿಲ್ಲ.
Actor Diganth and Aindrita Ray are constantly getting married news.But Aindritha has responded indirectly to this issue.. watch this video.