ಪ್ರಧಾನಿಗೆ ಭಯ ಎನ್ನುವ ಸಿದ್ದರಾಮಯ್ಯಗೆ ಅಧಿಕಾರದ ಸೊಕ್ಕು : ಬಿಎಸ್ ವೈ | Oneindia Kannada

Oneindia Kannada 2017-10-31

Views 174

"ಪ್ರಧಾನಿಗೆ ನನ್ನ ಕಂಡರೆ ಭಯ ಅಂತ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆಯುತ್ತಿದ್ದಾರೆ. ಸರ್ವಾಧಿಕಾರಿಯ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ. ಪ್ರಧಾನಿ ಬಗ್ಗೆ ಅವರು ನೀಡಿದ ಹೇಳಿಕೆ ಮೂರ್ಖತನದ ಪರಮಾವಧಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರಸ್ವಾಮೀಜಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕೆ.ಜೆ.ಜಾರ್ಜ್ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿ ರುಪಾಯಿ ಲೂಟಿ ಮಾಡಿದ್ದಾರೆ. ಅವರ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದು ಗುಡುಗಿದರು..ರಾಜ್ಯದ ಜನರು ಭಕ್ತಿಯಿಂದ ನಡೆದುಕೊಳ್ಳುವ ಮಂಜುನಾಥ ದೇವಸ್ಥಾನಕ್ಕೆ ಹೋಗುವಾಗ ಪ್ರಧಾನಿ ಮೋದಿ ಅವರು ಉಪವಾಸ ಇದ್ದರು. ಆದರೆ ಸಿದ್ದರಾಮಯ್ಯ, ನಾನು ಕೋಳಿ- ಮೀನು ತಿಂದು ಹೋಗಿದ್ದೆ ಎನ್ನುವ ಮೂಲಕ ರಾಜ್ಯದ ಜನರ ನಂಬಿಕೆಗೆ ಅವಮಾನ ಮಾಡಿದ್ದಾರೆ. ಈ ರೀತಿ ಧೋರಣೆಯ ಮುಖ್ಯಮಂತ್ರಿಯನ್ನು ಪಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು...

BJP state president BS Yeddyurappa alleges on Siddaramaiah as egoistic, He refers CM remark on PM Narendra Modi in Tumakuru Siddaganga mutt.

Share This Video


Download

  
Report form
RELATED VIDEOS