ನವೆಂಬರ್ 3ರಂದು ಖಾಸಗಿ ವೈದ್ಯರ ಮುಷ್ಕರ | ಮಣಿಪಾಲ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ

Oneindia Kannada 2017-11-03

Views 113

State Unit of India Medical Association (IMA) has called for a voluntary Bandh of all private hospitals and private clinics on November 3 against implementation of Karnataka Private Medical Establishments (Amendment) Bill, 2017. The Karnataka Private Medical Establishments (Amendment) Bill, 2017, was tabled in the assembly by health minister Ramesh Kumar. The bill seeks to regulate only private hospitals and keeps government facilities out of its purview. Here is an explanation from Dr. Sudarshan Ballal is an expert in nephrology, Chairman of Manipal Group, with about 34 years of experience behind him. Dr. H. Sudarshan Ballal was the best outgoing student (Blue Ribbon awardee) of the Kasturba Medical College, Manipal and a recipient of many Gold Medals in MBBS and M.D. Doctor explains about the effects of New Bill 2017. Watch Video.

ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್ ಮೆಂಟ್ ಮಸೂದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಹೊರಟಿರುವುದಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಯನ್ನು ವಿರೋಧಿಸಿ ನವೆಂಬರ್ 3 ರಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿವೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಈ ನೂತನ ಮಸೂದೆ ಮಂಡಿಸಲು ಉದ್ದೇಶಿಸಿದ್ದು ಈ ಹಿನ್ನೆಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನವೆಂಬರ್ 3 ರಂದು ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ಭಟ್ ತಿಳಿಸಿದ್ದಾರೆ.ನವೆಂಬರ್ 3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು ನವೆಂಬರ್ 3 ರ ಮುಂಜಾನೆ 6 ಗಂಟೆಯಿಂದ ಮರುದಿನ ನವೆಂಬರ್ 4 ರ ಮುಂಜಾನೆ 6 ರವರೆಗೆ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿವೆ. ಇದೀಗ ಮಣಿಪಾಲ ಗ್ರೂಪ್ ನ ಚೇರ್ ಮ್ಯಾನ್ ಡಾ ಸುದರ್ಶನ್ ಬಲ್ಲಾಳ್ ಈ ಸ್ಟ್ರೈಕ್ ಬಗ್ಗೆ ಮಾತನಾಡಿದ್ದಾರೆ. ಈ ವೀಡಿಯೋ ನೋಡಿ.

Share This Video


Download

  
Report form
RELATED VIDEOS