ಬೆಳ್ಳಿ ತೆರೆ ಮೇಲೆ ಮಿಂಚಲು ಬರ್ತಿದ್ದಾರೆ ಸ್ಟಾರ್ ನಂತರ ಮಕ್ಕಳು | Filmibeat Kannada

Filmibeat Kannada 2017-11-03

Views 12

Kannada Top actors children enters Silver Screen. So watch video to know Which Kannada Celebrities Children are acting in which Kannada Movie?


ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.! ಸ್ಯಾಂಡಲ್ ವುಡ್ ನಲ್ಲೀಗ ದರ್ಶನ್, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ನಟ-ನಟಿಯರದ್ದೇ ಟ್ರೆಂಡ್. ಇವರ ನಂತರ ಮತ್ತಷ್ಟು ಯುವ ನಟ-ನಟಿಯರು ಚಂದನವನದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಹೀಗಿರುವಾಗ, ಕನ್ನಡದ ಸ್ಟಾರ್ ನಟರು ಮಕ್ಕಳು ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಿದ್ದವಾಗುತ್ತಿದ್ದಾರೆ. ಈಗಿನಿಂದಲೇ ಬಣ್ಣದ ಲೋಕದ ಜೊತೆ ನಂಟು ಬೆಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕನ್ನಡದ ಟಾಪ್ ನಟರ ಮಕ್ಕಳು ಈಗಾಗಲೇ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಿದ್ರೆ, ಯಾವೆಲ್ಲಾ ಸ್ಟಾರ್ ನಟರ ಮಕ್ಕಳು ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮುದ್ದು ಮಗಳು ಐಶ್ಚರ್ಯ ಅಮ್ಮನ ಜೊತೆ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಅಭಿನಯಿಸುತ್ತಿರುವ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಪ್ರಿಯಾಂಕಾ ಅವರ ಮಗಳ ಪಾತ್ರದಲ್ಲಿ ಐಶ್ವರ್ಯ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನ 'ಮಮ್ಮಿ ಸೇವ್ ಮಿ' ಖ್ಯಾತಿಯ ಲೋಹಿತ್ ನಿರ್ದೇಶನ ಮಾಡಿದ್ದು, ಚಿತ್ರೀಕರಣ ನಡೆಯುತ್ತಿದೆ.

Share This Video


Download

  
Report form
RELATED VIDEOS