Bigg Boss Kannada 5 : ಬಿಗ್ ಬಾಸ್ ಗೆ ಹೋಗಲ್ಲ ಅಂದು ಖಡಕ್ಕಾಗಿ ಹೇಳಿದ ನಟಿ ಮಯೂರಿ | Filmibeat Kannada

Filmibeat Kannada 2017-11-07

Views 1.6K

Will Kannada Actress Mayuri enter Bigg Boss house.? Mayuri says, she is not willing to go to Bigg Boss when Sudeep asked her in Kicchana Kitchen Time.


'ಬಿಗ್ ಬಾಸ್' ಮನೆಗೆ ಹೋಗಲ್ಲ ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ ಮಯೂರಿ.! 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ ನಟಿ ಮಯೂರಿ 'ಬಿಗ್ ಬಾಸ್' ಮನೆ ಒಳಗೆ ಹೋಗಲ್ವಂತೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಭಾಗವಾಗಿರುವ 'ಕಿಚ್ಚನ್ ಟೈಮ್'ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ, ಕಿಚ್ಚ ಸುದೀಪ್ ರವರಿಗೆ 'ಗಿರಮಿಟ್' ಮಾಡಿಕೊಟ್ಟ ನಟಿ ಮಯೂರಿ, ಅದೇ ಕಾರ್ಯಕ್ರಮದಲ್ಲಿ ''ಬಿಗ್ ಬಾಸ್' ಶೋನಲ್ಲಿ ಭಾಗವಹಿಸುವುದಿಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ.ಅಡುಗೆ ಮಾಡ್ತಾ ಮಾಡ್ತಾ, ''ಮುಂದಿನ ವರ್ಷ ನೀವು 'ಬಿಗ್ ಬಾಸ್' ಮನೆಯೊಳಗೆ ಹೋಗ್ತೀರಾ ಅಂತ ಊಹಾಪೋಹ ಇದೆ'' ಎಂದು ಸುದೀಪ್ ಕೇಳಿದರು. ''ಅದಕ್ಕೆ, ಇಲ್ಲ ಹೋಗಲ್ಲ'' ಎಂದು ಮಯೂರಿ ಸ್ಪಷ್ಟವಾಗಿ ನುಡಿದರು.ಹಾಗ್ನೋಡಿದ್ರೆ, 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಮಯೂರಿ ಜೊತೆ ನಟಿಸಿದ ಜೆಕೆ ಕೂಡ ''ಬಿಗ್ ಬಾಸ್' ಮನೆಯೊಳಗೆ ಹೋಗಲ್ಲ'' ಎಂದು ಚಂದನ್ ಬಳಿ ಹೇಳಿಕೊಂಡಿದ್ದರಂತೆ. ಆದ್ರೆ, ಇಂದು ಅದೇ ಜೆಕೆ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದಾರೆ. ಈ ವಿಚಾರವನ್ನ ಬಹಿರಂಗ ಪಡಿಸಿದ್ದು ನಟ ಚಂದನ್. ನಟ ಚಂದನ್ ಕೂಡ 'ಕಿಚ್ಚನ್ ಟೈಮ್' ನಲ್ಲಿ ಭಾಗವಹಿಸಿ, ಸುದೀಪ್ ಜೊತೆಗೂಡಿ ಚಿಕನ್ ಖಾದ್ಯ ಸಿದ್ಧಪಡಿಸಿದರು.

Share This Video


Download

  
Report form
RELATED VIDEOS