Bigg Boss Kannada 5: Week 5: ''Niveditha and I will stay here for 100 days'' says Jaya Sreenivasan.
ಬರೆದು ಇಟ್ಕೊಳ್ಳಿ.. 'ಬಿಗ್ ಬಾಸ್'ನಲ್ಲಿ ಜಯಶ್ರೀನಿವಾಸನ್, ನಿವೇದಿತಾ 100 ದಿನ ಇರೋದು ಪಕ್ಕಾ.!'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಹಾಗೂ 'ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ಹಂಡ್ರೆಡ್ ಡೇಸ್ ಇರುವುದು ಗ್ಯಾರೆಂಟಿ. ಹಾಗಂತ ಭವಿಷ್ಯ ನುಡಿದಿದ್ದಾರೆ ಜಯಶ್ರೀನಿವಾಸನ್. ಸಂಖ್ಯಾಬಲದ ಮೇಲೆ ಲೆಕ್ಕ ಹಾಕಿದ ಜಯಶ್ರೀನಿವಾಸನ್, ತಾವು ಮತ್ತು ನಿವೇದಿತಾ 'ಬಿಗ್ ಬಾಸ್' ಮನೆಯಲ್ಲಿ ನೂರು ದಿನ ಇರುವುದು ಪಕ್ಕಾ ಎಂದಿದ್ದಾರೆ.ಅಷ್ಟು ದಿನ ಇರಲು ಗೇಮ್ ಪ್ಲಾನ್ ಕೂಡ ರೆಡಿ ಮಾಡಿಕೊಂಡಿರುವ ಜಯಶ್ರೀನಿವಾಸನ್, ದಿವಾಕರ್ ಜೊತೆ ಜಗಳ ಆಡದೆ 'ಸ್ಮಾರ್ಟ್' ಆಗಿರಲು ನಿರ್ಧರಿಸಿದ್ದಾರೆ. ''ಇನ್ಮೇಲೆ ನಾನು ಕಿತ್ತಾಡದೆ, ಸ್ವಲ್ಪ ಸ್ಮಾರ್ಟ್ ಆಗಿರುತ್ತೇನೆ. ಯಾಕಂದ್ರೆ, ನನಗೆ ಕೋಪ ಬಂದು, ಏನಾದರೂ ಎತ್ತಿ ಹಾಕ್ಬಿಟ್ಟರೆ ನನ್ನನ್ನ ಹೊರಗೆ ಕಳುಹಿಸಿಬಿಡುತ್ತಾರೆ. ಅದಕ್ಕೆ ದಿವಾಕರ್ ಏನೇ ಕೆಣಕಿದರೂ, ಮಾತನಾಡಬಾರದು ಅಂತ ಡಿಸೈಡ್ ಮಾಡಿಬಿಟ್ಟಿದ್ದೇನೆ'' ಎಂದು ದಿವಾಕರ್ ಮುಂದೆಯೇ ಜಯಶ್ರೀನಿವಾಸನ್ ಹೇಳಿದ್ದಾರೆ.