Bigg Boss Kannada Season 5 : ನಿವೇದಿತಾ ಗೌಡಗೆ ಕಿಚ್ಚನಿಂದ ಕಾಂಪ್ಲಿಮೆಂಟ್ | Filmibeat Kannada

Filmibeat Kannada 2017-11-27

Views 3.4K

Bigg Boss Kannada 5: Week 6: Sudeep praises, appreciates & compliments Niveditha Gowda for managing the captaincy well in Big House.


ನಿವೇದಿತಾರನ್ನ ಹೊಗಳಿದ ಸುದೀಪ್: ಕಿಚ್ಚ ಕೊಟ್ಟ ಕಾಂಪ್ಲಿಮೆಂಟ್ ಏನು? ಡಬ್ ಸ್ಮ್ಯಾಶ್ ರಾಜಕುಮಾರಿ' ನಿವೇದಿತಾ ಗೌಡ ರವರನ್ನ ಕಿಚ್ಚ ಸುದೀಪ್ ಹೊಗಳಿದ್ದಾರೆ. ಕಳೆದ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ನಿವೇದಿತಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ''ಒಂದು ಕಾಂಪ್ಲಿಮೆಂಟ್ ಕೊಡುತ್ತೇನೆ... ನಿಮ್ಮ ವಯಸ್ಸಿಗೆ ಮೀರಿದ ತಿಳುವಳಿಕೆ ನಿಮಗೆ ಇದೆ. ಬೆಸ್ಟ್ ಪರ್ಫಾಮರ್ ಹಾಗೂ ಕಳಪೆ ಬೋರ್ಡ್ ನಿರ್ಧಾರವನ್ನ ಚೆನ್ನಾಗಿ ನಿಭಾಯಿಸಿದ್ರಿ'' ಎನ್ನುತ್ತಾ ನಿವೇದಿತಾ ಗೌಡ ರವರಲ್ಲಿ ಇದ್ದ ಪ್ರಬುದ್ಧತೆಯನ್ನ ಸುದೀಪ್ ಶ್ಲಾಘಿಸಿದರು. ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ಅತಿ ಕಿರಿಯ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ, ಇಡೀ ಮನೆಯನ್ನ ನಿವೇದಿತಾ ಬ್ಯಾಲೆನ್ಸ್ ಮಾಡಿದ ರೀತಿ ಅಚ್ಚುಕಟ್ಟಾಗಿತ್ತು. ಅಂದ್ಹಾಗೆ, ಕ್ಯಾಪ್ಟೆನ್ಸಿ ಹಾಗೂ ಸ್ಕೂಲ್ ಟಾಸ್ಕ್... ಎರಡೂ ಒಟ್ಟೊಟ್ಟಿಗೆ ಸಿಕ್ಕ ಕಾರಣ ಕಳೆದ ವಾರ ನಿವೇದಿತಾ ಪಾಲಿಗೆ ಸಿಕ್ಕಾಪಟ್ಟೆ ಲಕ್ಕಿ ಅಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

Share This Video


Download

  
Report form
RELATED VIDEOS