Kannada Actor Shiva Rajkumar to produce a serial for Udaya TV & Daughter Niveditha is all set to enter Serial Field
'ಸೀರಿಯಲ್ ಕ್ಷೇತ್ರ'ಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ. ಸಿನಿಮಾ ಕಲಾವಿದರು ಅಂದ ಮಾತ್ರಕ್ಕೆ ಕೇವಲ ಅಭಿನಯವಷ್ಟೇ ಅವರ ಕೆಲಸವಲ್ಲ. ಅಭಿನಯ ಹೊರತು ಪಡಿಸಿದಂತೆ ಬೇರೆ ಬೇರೆ ಕ್ಷೇತ್ರದಲ್ಲೂ ತಮ್ಮನ್ನ ಗುರುತಿಸಿಕೊಳ್ಳುವುದು ಕಾಮನ್. ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಈಗ ಕಿರುತೆರೆಯಲ್ಲಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. 'ನಾನಿರುವಿದೆ ನಿಮಗಾಗಿ' ಹಾಗೂ 'ಕಿಕ್' ಶೋಗಳಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ ಈಗ ಮೆಗಾ ಸೀರಿಯಲ್ ನತ್ತ ಮುಖ ಮಾಡಿದ್ದಾರೆ. ಶಿವರಾಜ್ ಕುಮಾರ್ ನಿರ್ಮಾಣದ ಸಂಸ್ಥೆಗೆ ಡಿಸೆಂಬರ್ 18(ಶನಿವಾರ) ಅಧಿಕೃತವಾಗಿ ಚಾಲನೆ ಸಿಗಲಿದೆ. ವಿಶೇಷ ಅಂದ್ರೆ ಈ ಬಾರಿ ಶಿವಣ್ಣ ತಮ್ಮ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದಾರೆ.ಶಿವರಾಜ್ ಕುಮಾರ್ ನಿರ್ಮಾಣದ ಸಂಸ್ಥೆಗೆ 'ಶ್ರೀ ಮುತ್ತು ಸಿನಿ ಸರ್ವಿಸ್' ಅಂತ ಹೆಸರಿಡಲಾಗಿದೆ. ಈಗಾಗ್ಲೇ ಇದೇ ಹೆಸರಿನಲ್ಲಿ ಹೊರಾಂಗಣ ಚಿತ್ರೀಕರಣ (ಔಟ್ ಡೋರ್ ಯೂನಿಟ್ ) ಘಟಕ ಇದೆ. ಈಗ ಅದೇ ಹೆಸರಿನಲ್ಲಿ ಶಿವಣ್ಣ 'ಧಾರಾವಾಹಿ' ನಿರ್ಮಾಣಕ್ಕೆ ಮುಂದಾಗಿದ್ದಾರೆ