Sanjay Leela Bhansali's upcoming film Padmavati that ran into trouble with Rajput Karni Sena and other fringe groups may be delayed beyond December 1 when it was expected to be released.
''ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.! ಎಲ್ಲ ಅಂದುಕೊಂಡಂತೆ ಆಗಿದ್ದರೇ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಸಿನಿಮಾ ಡಿಸೆಂಬರ್ 1 ರಂದು ತೆರೆಕಾಣಬೇಕಿತ್ತು. ಆದ್ರೆ, ರಜಪೂತ ಕರಣಿ ಸೇನೆಯ ವಿರೋಧ ವ್ಯಕ್ತವಾದ ಹಿನ್ನೆಲೆ ದೇಶಾದ್ಯಂತ ದೊಡ್ಡ ವಿವಾದ ಸೃಷ್ಠಿಯಾಗಿದೆ. ಈ ವಿವಾದ ವಿಪರೀತವಾದ ಪರಿಣಾಮ 'ಪದ್ಮಾವತಿ' ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ ಎನ್ನಲಾಗುತ್ತಿದೆ. 'ಪದ್ಮಾವತಿ' ಚಿತ್ರಕ್ಕೆ ಸೆನ್ಸಾರ್ ಗಾಗಿ ಸಲ್ಲಿಸಿದ್ದ ಅರ್ಜಿ ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಚಿತ್ರದ ಬಿಡುಗಡೆಗೆ ತಾತ್ಕಲಿಕ ತಡೆ ನೀಡಿದೆ. ಪ್ರಮಾಣ ಪತ್ರಕ್ಕೆ ಸಹಿ ಹಾಕದೆ ಚಿತ್ರತಂಡಕ್ಕೆ ಅರ್ಜಿ ವಾಪಸ್ ನೀಡಿದೆ ಎನ್ನಲಾಗಿದೆ.ಹೀಗಾಗಿ, ಮೊದಲು ನಿರ್ಧರಿಸಿದಂತೆ ಡಿಸೆಂಬರ್ 1 ಕ್ಕೆ 'ಪದ್ಮಾವತಿ' ಬರುವುದು ಅನುಮಾನವಾಗಿದೆ. ಮತ್ತೆ ಸೆನ್ಸಾರ್ ಮಂಡಳಿಗೆ ಹೊಸ ಅರ್ಜಿ ಸಲ್ಲಿಸಬೇಕು. ಅದಾದ ನಂತರ ಸೆನ್ಸಾರ್ ಮಂಡಳಿ ಮತ್ತೆ ವಿಮರ್ಶೆ ನೀಡಬೇಕು. ಆದ ಕಾರಣ ಚಿತ್ರದ ರಿಲೀಸ್ ದಿನಾಂಕವನ್ನ ಡಿಸೆಂಬರ್ ನಿಂದ ಜನವರಿಗೆ ಶಿಫ್ಟ್ ಮಾಡಲಾಗಿದೆಯಂತೆ.