ಸೂಪರ್ ರುಚಿ ಸಂತೆ | Super ruchi sante | Oneindia Kannada

Oneindia Kannada 2017-11-29

Views 3

ನೀರೂರಿಸುವ ಬಗೆ ಬಗೆಯ ತಿಂಡಿ-ತಿನಿಸುಗಳು, ಯಾವುದು ತಿನ್ನಬೇಕು ಅಥವಾ ತಿನ್ನಬೇಡ ಎಂಬ ಗೊಂದಲ. ಆದರೂ, ರುಚಿ ನೋಡಲೇಬೇಕೆಂಬ ಆಸೆ. ಸಾಂಪ್ರದಾಯಿಕ, ಪಾಶ್ಚಾತ್ಯ, ಸಿರಿಧಾನ್ಯದಿಂದ ತಯಾರಿಸಿದ ಅಕ್ಕಿ, ರಾಗಿ, ಜೋಳದಿಂದ ಹಿಡಿದು ಪಿಜ್ಜಾ, ಐಸ್‌ಕ್ರೀಂವರೆಗೆ ಒಂದಲ್ಲಾ ಎರಡಲ್ಲ, ನೂರಾರು ಬಗೆಯ ತಿಂಡಿ-ತಿನಿಸುಗಳು 'ಸೂಪರ್‌ ರುಚೀಸ್‌' ಆಹಾರ ಮೇಳದಲ್ಲಿ ಲಭ್ಯ. ಮೊದಲ ದಿನವೇ ಸುಮಾರು 10 ಸಾವಿರ ಮಂದಿ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿ, ತಮಗೆ ಬೇಕಾದುದನ್ನು ಸವಿದು ಸಂಭ್ರಮಿಸಿದರು. ಇದು ಕಂಡು ಬಂದದ್ದು ಫ್ರೀಡಂ ಪಾರ್ಕ್‌ನಲ್ಲಿ. ರೆಡ್‌ ರಿಬ್ಬನ್‌ ಸಂಸ್ಥೆ ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ 'ಸೂಪರ್‌ ರುಚೀಸ್‌' ಎಂಬ ವಿನೂತನ ಆಹಾರ ಮೇಳದಲ್ಲಿ. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಬೃಹತ್‌ ಸಸ್ಯಾಹಾರಿ ಆಹಾರ ಮೇಳಕ್ಕೆ ಟೌನ್‌ ಎಸೆನ್ಷಿಯಲ್‌ ಪ್ರೈ.ಲಿ.ನ ನಿರ್ದೇಶಕ ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು. ಶುಕ್ರವಾರ ಆರಂಭವಾಗಿರುವ ಇದು ನ.26ರವರೆಗೆ ಬೆ. 10 ರಿಂದ ರಾ.9ರವರೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯಿತು.

Ruchi sante is a food festival conducted by unik360 team. Foot fall was more than a lakh. Even few celebrities showed up on the location and our channel did a video on it.

Share This Video


Download

  
Report form
RELATED VIDEOS