Sriimurali and Shiva Rajkumar starrer kannada movie 'Mufti' review. 'Mufti' is an action entertainer and is a treat for Sriimurali Fans.
ಫಸ್ಟ್ ರಿವ್ಯೂ : ಮಫ್ತಿ ಚಿತ್ರ ನೋಡಿ ಜೈಹೋ ಎಂದ ಪ್ರೇಕ್ಷಕರು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಮಫ್ತಿ ಚಿತ್ರ ಇಂದು(ಡಿಸೆಂಬರ್ 1) ರಾಜ್ಯಾದ್ಯಂತ ತೆರೆಕಂಡಿದೆ. ಒಂದು ವರ್ಷದ ಬಳಿಕ ಶ್ರೀ ಮುರಳಿ ಅಭಿನಯದ ಸಿನಿಮಾ ತೆರೆಗೆ ಬಂದಿದ್ದು ರಾಜ್ಯದ 350ಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಬೆಳ್ಳಂಬೆಳ್ಳಿಗ್ಗೆ 5ಗಂಟೆಗೆ ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು ಮಫ್ತಿ ಚಿತ್ರ ನೋಡಿದ ಪ್ರೇಕ್ಷಕರು ಜೈಹೋ ಎಂದಿದ್ದಾರೆ. ಒಂದು ವರ್ಷದಿಂದ ಕಾತುರದಿಂದ ಕಾದಿದ್ದ ಶ್ರೀ ಮುರಳಿ ಅಭಿಮಾನಿಗಳು ಮಫ್ತಿ ಸಿನಿಮಾ ತುಂಬಾನೇ ಇಷ್ಟವಾಗಿದೆ. ಮಫ್ತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀ ಮುರಳಿ ಮಿಂಚಿದ್ದು ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರೋದು ತೆರೆಮೇಲೆ ಕಾಣುತ್ತೆ. ಉಗ್ರಂ ಮತ್ತು ರಥಾವರ ಸಿನಿಮಾ ನೋಡಿ ಶ್ರೀ ಮುರಳಿಯವರನ್ನ ಇಷ್ಟಪಟ್ಟಿದ್ದ ಸಿನಿಪ್ರಿಯರಿಗೆ ಮಫ್ತಿ ಚಿತ್ರವೂ ಇಷ್ಟವಾಗಲಿದೆ.