'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎಲ್ಲರಿಗೂ ರುಚಿ ರುಚಿಯಾದ ಅಡುಗೆ ಮಾಡುತ್ತ, ಮನೆಯಲ್ಲಿ 'ಅಪ್ಪ'ನ ಸ್ಥಾನ ತುಂಬಿದ್ದ ಸಿಹಿ ಕಹಿ ಚಂದ್ರು ಔಟ್ ಆದ ಬಳಿಕ 'ಬಿಗ್ ಬಾಸ್' ಮನೆಯ ಎಲ್ಲ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ, ಮನೆಯ ಒಬ್ಬೊಬ್ಬ ಸದಸ್ಯರು ಕನ್ಫೆಶನ್ ರೂಮ್ ಒಳಗೆ ಹೋಗಿ ತಮಗೆ ಆಗದ ಇಬ್ಬರು ಸದಸ್ಯರನ್ನ ನಾಮಿನೇಟ್ ಮಾಡಬೇಕಿತ್ತು. ಆದ್ರೆ, ಈ ವಾರ ಹಾಗೆ ನಡೆಯಲಿಲ್ಲ.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ತದ್ವಿರುದ್ಧವಾಗಿತ್ತು. ಮನೆಯ ಸದಸ್ಯರೆಲ್ಲ ಕುಣಿದು ಕುಪ್ಪಳಿಸುತ್ತಿದ್ದಾಗ, 'ಬಿಗ್ ಬಾಸ್' ಶಾಕ್ ಟ್ರೀಟ್ಮೆಂಟ್ ಕೊಟ್ಟರು.'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐವತ್ತು ದಿನಗಳು ಕಳೆದ ಮೇಲೆ ಎಲ್ಲ ಸದಸ್ಯರನ್ನ 'ಬಿಗ್ ಬಾಸ್' ಡೇಂಜರ್ ಝೋನ್ ಗೆ ತಳ್ಳಿದ್ದಾರೆ.
Bigg Boss Kannada 5: Week 8: Diwakar, Riyaz, Sameeracharya, Jaya srinivasan, Ashita Chandrappa, Shruti Prakash, Chandan Shetty, Anupama Gowda, Niveditha Gowda, Jayaram Karthik and Krishi Thapanda are nominated for this week's elimination. In the Eighth week elimination, Bigg Boss directly nominates all the 11 members in the Big House.