ಹಲ್ಲೆ ನಡೆದ ಬಗ್ಗೆ ನಾಗಿಣಿ ಖ್ಯಾತಿಯ ದೀಕ್ಷಿತ್ ಹೇಳಿದ್ದೇನು ಗೊತ್ತಾ? | Filmibeat Kannada

Filmibeat Kannada 2017-12-09

Views 1

'ನಾಗಿಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟ ದೀಕ್ಷಿತ್ ಶೆಟ್ಟಿ ಮೇಲೆ ನಿನ್ನೆ ತಡ ರಾತ್ರಿ ಹಲ್ಲೆ ಆಗಿತ್ತು. ಈ ಬಗ್ಗೆ ವಿಜಯ ನಗರ ಪೊಲೀಸ್ ಠಾಣೆಗೆ ಈಗಾಗಲೇ ದೀಕ್ಷಿತ್ ದೂರು ದಾಖಲಿಸಿದ್ದು, ಇದೀಗ ಘಟನೆಯ ಬಗ್ಗೆ ಮಾತನಾಡಿದ್ದಾರೆ. 'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ದೀಕ್ಷಿತ್ ಆ ಸೀರಿಯಲ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಅಲ್ಲಿದೇ, ಇತ್ತೀಚಿಗಷ್ಟೆ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ಕೂಡ ಗೆದ್ದಿದ್ದರು. ಹೀಗಿರುವಾಗ ನಿನ್ನೆ ರಾತ್ರಿ ಮೂರು ಜನ ದುಷ್ಕರ್ಮಿಗಳು ದೀಕ್ಷಿತ್ ಹಲ್ಲೆ ಮಾಡಿದ್ದರು. ಇದೀಗ ನಿನ್ನೆ ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ನಟ ದೀಕ್ಷಿತ್ ಶೆಟ್ಟಿ ವಿವರಿಸಿದ್ದಾರೆ. ಜೀ ಕನ್ನಡ ವಾಹಿನಿ ಫೇಸ್ ಬುಕ್ ಪೇಜ್ ನಲ್ಲಿ ದೀಕ್ಷಿತ್ ವಿಡಿಯೋ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.''ಎಲ್ಲರಿಗೂ ನಮಸ್ಕಾರ ನಾನು ತುಂಬ ಕ್ಷೇಮವಾಗಿ ಇದ್ದೇನೆ. ನಿನ್ನೆ ರಾತ್ರಿ ಒಂದು ಹಲ್ಲೆ ನಡೆಯಿತು. ಅದರ ಬಗ್ಗೆ ಮಾಧ್ಯಮಗಳಲ್ಲಿಯೂ ಬರುತ್ತಿದೆ. ನನಗೆ ಏನು ಆಗಿಲ್ಲ''.''ನನ್ನ ಕಾರು ಸ್ವಲ್ಪ ಡ್ಯಾಮೇಜ್ ಆಗಿದೆ. ರಾತ್ರಿ ಸಿನಿಮಾ ನೋಡಿಕೊಂಡು ಬರುತ್ತಿದೆ. ಆ ಟೈಂ ನಲ್ಲಿ ಮೂರು ಜನ ಅಪರಿಚಿತರು ಬಂದರು''
Zee Kannada channel's Nagini serial actor Deekshith Shetty Spoke about the attack, which happened to him last night (December 7th) in Vijaya nagara, Bengaluru.

Share This Video


Download

  
Report form
RELATED VIDEOS