ನಾಗಿಣಿ ಧಾರಾವಾಹಿಯ ಪ್ರಮುಖ ಪಾತ್ರದ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ | Filmibeat Kannada

Filmibeat Kannada 2017-12-08

Views 2

Zee Kannada channel's Nagini serial actor Dheekshith Shetty was attacked by three strangers in Vijayanagara, Bengaluru last night (December 7th). Dheekshith Shetty has lodged the complaint in Vijayanagara Police Station.

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಆಗಿದೆ. ಬೆಂಗಳೂರಿನ ವಿಜಯ ನಗರದಲ್ಲಿ ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. 'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ದೀಕ್ಷಿತ್ ಆ ಸೀರಿಯಲ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಅಲ್ಲಿದೆ ಇತ್ತೀಚಿಗಷ್ಟೆ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ಕೂಡ ಗೆದ್ದಿದ್ದರು. ಆದರೆ ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಗಳಿಸಿದ ಈ ನಟನ ಮೇಲೆ ಈಗ ಹಲ್ಲೆ ನಡೆದಿದೆ. ಜೊತೆಗೆ ಈಗಾಗಲೇ ಈ ಪ್ರಕರಣಕ್ಕೆ ಸಂಬಂದಿಸಿದಂತೆ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ದೀಕ್ಷಿತ್ ಶೆಟ್ಟಿ ನಿನ್ನೆ ತಡರಾತ್ರಿ ವಿಜಯನಗರದ ಮಾರುತಿ ಮಂದಿರದ ಬಳಿ ತಮ್ಮ ಕಾರ್ ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

Share This Video


Download

  
Report form
RELATED VIDEOS