ಸುದೀಪ್ ಗೆ ಇನ್ಸ್ಟಾಗ್ರಾಮ್ ನಲ್ಲಿ 1 ಲಕ್ಷ ಫಾಲ್ಲೋರ್ಸ್ ಇದ್ರೂ ಫಾಲೋ ಮಾಡೋದು ಇಬ್ಬರನ್ನೇ | Filmibeat Kannada

Filmibeat Kannada 2017-12-12

Views 1.7K

ಕಿಚ್ಚ ಸುದೀಪ್ ಪ್ರತಿನಿತ್ಯ ಹೊಸ ಹೊಸ ಅಭಿಮಾನಿಗಳನ್ನು ಸಂಪಾದನೆ ಮಾಡುತ್ತಿರುವ ಕನ್ನಡದ ನಟ. ಇವರ ನೇರ ನುಡಿಯ ಸ್ವಭಾವವೇ ಅದೆಷ್ಟೋ ಜನರಿಗೆ ಇವರನ್ನು ಫಾಲೋ ಮಾಡಬೇಕು ಎನ್ನುವ ಮನಸ್ಸಾಗಲು ಕಾರಣವಾಗುತ್ತೆ. ಯಾವುದೇ ಗಾಡ್ ಫಾದರ್ ಇಲ್ಲದೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉತ್ಸಾಹವನ್ನು ತುಂಬುತ್ತದೆ. ಇದೇ ನೇರ ನುಡಿಯ ನಾಯಕ ಈಗ ಮತ್ತೊಂದು ಮೈಲಿಗಲ್ಲನ್ನು ಸೃಷ್ಠಿ ಮಾಡಿದ್ದಾರೆ. ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ ಈಗ ಇನ್‌ಸ್ಟಾಗ್ರಾಂ ನಲ್ಲಿ ತಮ್ಮದೇ ದಾಖಲೆ ಬರೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಕಿಚ್ಚನನ್ನು ಫಾಲೋ ಮಾಡಿದರೆ ಸುದೀಪ್ ಮಾತ್ರ ಈ ಇಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಕಿಚ್ಚ ಫಾಲೋ ಮಾಡುತ್ತಿರುವುದು ಯಾರನ್ನ? ಸುದೀಪ್ ಇವರನ್ನೇ ಫಾಲೋ ಮಾಡಲು ಕಾರಣವೇನು ಎಲ್ಲದಕ್ಕೂ ಉತ್ತರ ಇಲ್ಲಿದೆ. ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಏಕೈಕ ನಟ ಕಿಚ್ಚ ಸುದೀಪ್. ಸುದೀಪ್ ಅಭಿಮಾನಿಗಳು ಕಿಚ್ಚನ ಪ್ರತಿ ನಡೆಯನ್ನು ಫಾಲೋ ಮಾಡುವುದರ ಜೊತೆಗೆ ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾ ಬಂದಿದ್ದಾರೆ.
Actor Kichcha Sudeep is the only actor in Kannada who has one lakh fans following in Instagram and They had 1.4 million followers on Twitter.

Share This Video


Download

  
Report form
RELATED VIDEOS