ವೆಸ್ಟ್‌ಇಂಡೀಸ್ ಮೂಲದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಟ್ವೆಂಟಿ-20 ಕ್ರಿಕೆಟ್ ನಲ್ಲಿ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್ ಸಿಡಿಸಿದ್ದಾರೆ.ಇನಿಂಗ್ಸ್‌ವೊಂದರಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದರು. ಈ ಹಿಂದೆ 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇನ್ನಿಂಗ್ಸ್ ವೊಂದರಲ್ಲಿ 17 ಸಿಕ್ಸರ್ ಬಾರಿಸಿದ್ದರು. ಇದಲ್ಲದೆ ಈ ಪಂದ್ಯದ ಶತಕ ಗಳಿಸಿ ಗೇಲ್ ಅವರು ಈ ಮಾದರಿ ಕ್ರಿಕೆಟ್ ನಲ್ಲಿ ಒಟ್ಟು 20 ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಇದಲ್ಲದೆ, ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿ, ಈ ಸಾಧನೆ ಮಾಡಿದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ .
Chris Gayle yet again steals the show by hitting maximum number of sixes in a single t20 innings . The previous record was set by himself which was 17 inj an innings.