ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣೆಯ ಫಲಿತಾಂಶವನ್ನು ನಿನ್ನೆಯೆಲ್ಲಾ ಟಿವಿಯ ಮುಂದೆ ಕೂತು ನೋಡಿದ್ದರೂ, ಬೆಳ್ಳಂಬೆಳಗ್ಗೆ ನ್ಯೂಸ್ ಪೇಪರ್ ಗಾಗಿ ಕಾಯುತ್ತಿದ್ದವರು ಹಲವರು. ಏಕೆಂದರೆ ಯಾವುದೇ ಸುದ್ದಿಯ ಕುರಿತು ಸಮಗ್ರ ಮಾಹಿತಿ ಬೇಕೆಂದರೆ ನ್ಯೂಸ್ ಪೇಪರ್ ಬೇಕೇ ಬೇಕು! ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಗೆಲುವನ್ನು ಹಲವು ಪತ್ರಿಕೆಗಳು ಅವುಗಳ ದೃಷ್ಟಿಕೋನಕ್ಕೆ ತಕ್ಕಂತೆ ಚಿತ್ರಿಸಿವೆ. ಕೆಲವು ಪತ್ರಿಕೆಗಳು ಬಿಜೆಪಿ ಗೆಲುವನ್ನು ಶ್ಲಾಘಿಸಿದ್ದರೆ, ಮತ್ತೆ ಕೆಲವರು ಇದು ಬಿಜೆಪಿಗೆ ಕಷ್ಟದ ಗೆಲುವು ಎಂದು ಬಣ್ಣಿಸಿವೆ.ಕಾಂಗ್ರೆಸ್ ಸೋತರೂ ಗೆದ್ದಿದೆ, ಬಿಜೆಪಿ ಪ್ರಯಾಸದಲ್ಲೇ ಗೆಲುವು ಕಂಡಿದೆ ಎಂದೂ ವಿಶ್ಲೇಷಿಸಿವೆ. ಇಂದಿನ 'ಹೆಡ್ ಲೈನ್ ಆಫ್ ದಿ ಡೆ'ಯಾವ ಪತ್ರಿಕೆಗೆ ಎಂದು ಕೇಳಿದರೆ, ಬಹುಶಃ 'ವಿಶ್ವವಾಣಿ' ಎಂದರೆ ತಪ್ಪಾಗಲಾರದು. 'ಗೆದ್ದು ಬಾಗಿದ ಬಿಜೆಪಿ, ಸೋತು ಬಾಗಿದ ಕಾಂಗ್ರೆಸ್!' ಎಂಬ ಸೊಗಸಾದ ಶೀರ್ಷಿಕೆ ನೀಡಿ, ಕಾಂಗ್ರೆಸ್ ನ ಹೋರಾಟವನ್ನೂ ಶ್ಲಾಘಿಸಿ, ಬಿಜೆಪಿಯ ಪ್ರಯಾಸದ ಗೆಲುವಿನ ಕುರಿತು ಎಚ್ಚರಿಕೆಯನ್ನೂ ನೀಡಿದೆ.