ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 55ನೇ ವಯಸ್ಸಿನಲ್ಲೂ ಇಂದಿಗೂ ಚಿರಯುವಕನಂತಿರುವ ನಟ. ಅಭಿನಯದಲ್ಲಾಗಲಿ, ನೃತ್ಯದಲ್ಲಾಗಲಿ ಶಿವರಾಜ್ ಕುಮಾರ್ ರನ್ನ ಮೀರಿಸುವವರಿಲ್ಲ ಅನ್ನೋದು ಅಭಿಮಾನಿಗಳು ಮತ್ತು ಇಡೀ ಸಿನಿಮಾರಂಗದವರು ಹೇಳುವ ಮಾತು. ತಮ್ಮ 55ನೇ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ತಮ್ಮನ್ನ ತಾವು ಹೊಸ ಹೊಸ ಎಕ್ಸ್‌ಪೆರಿಮೆಂಟ್ ಗಳಲ್ಲಿ ತೊಡಗಿಸಿಕೊಳ್ಳುತ್ತಿರುತ್ತಾರೆ ಅನ್ನೋದಕ್ಕೆ ಒಂದು ಉತ್ತಮ ಉದಾಹರಣೆ ಸಿಕ್ಕಿದೆ. ಇಂದು (ಡಿ 19) ಗೋವಾದಲ್ಲಿರುವ ಶಿವರಾಜ್ ಕುಮಾರ್ ಪ್ಯಾರಾಸೈಲಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಯುವಕರೇ ಭಯ ಬೀಳುವ ಈ ಸಾಹಸವನ್ನ ಶಿವಣ್ಣ ಮಾಡಿದ್ದಾರೆ.
ಸುಮಾರು 2-30 ನಿಮಿಷಗಳ ಕಾಲ ಸಮುದ್ರ ಮೇಲ್ಭಾಗದಲ್ಲಿ ಪ್ಯಾರಾಸೈಲಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ. ಸಿನಿಮಾಗಳಲ್ಲಿಯೂ ಡ್ಯೂಪ್ ಬಳಸದೇ ಸಾಹಸ ಮಾಡುವ ಶಿವರಾಜ್ ಕುಮಾರ್ ನಿಜ ಜೀವನದಲ್ಲಿಯೂ ಲೈಫ್ ನ ಚೆನ್ನಾಗಿ ಎಂಜಾಯ್ ಮಾಡುತ್ತಾರೆ ಅನ್ನೋದಕ್ಕೆ ಇದೊಂದು ಉತ್ತಮ ನಿದರ್ಶನ.