Bigg Boss Kannada Season 5 : ಎಲ್ಲಾ ಸ್ಪರ್ಧಿಗಳ ಮೇಲೂ ಬೇಸತ್ತು ಗರಂ ಆದ ಕಿಚ್ಚ ಸುದೀಪ್ | Filmibeat Kannada

Filmibeat Kannada 2017-12-26

Views 1.9K

Bigg Boss Kannada 5: Week 10: Kiccha Sudeep questions all contestants for their behavior when Samyuktha assaulted Sameeracharya.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸ್ವಲ್ಪ 'ವಿಚಿತ್ರ'ವಾಗಿದೆ. ಕಾರಣ.. 'ವಿಚಿತ್ರ' ಸ್ಪರ್ಧಿಗಳು. ಎಲ್ಲರ ನಡವಳಿಕೆ ಕೂಡ ಅಷ್ಟೇ 'ವಿಚಿತ್ರ'ವಾಗಿದೆ. ಒಂದು ಲೋಟ ಹಾಲು, ಒಂದು ಕಪ್ ಮೊಸರು, ಪುದಿನ ಸೊಪ್ಪು, ಒಂದು ಪ್ಯಾಕೆಟ್ ಬಿಸ್ಕತ್ತು, ಐಸ್ ಕ್ರೀಮ್, ಚಾಕಲೇಟ್ ಗಳಿಗೆಲ್ಲ ರಂಪಾಟ ಮಾಡಿಕೊಳ್ಳುವ ಈ ಸ್ಪರ್ಧಿಗಳನ್ನ ನೋಡಿ ನೋಡಿ ವೀಕ್ಷಕರಿಗೂ 'ವಿಚಿತ್ರ' ಎನಿಸಿಬಿಟ್ಟಿದೆ.ಬರೀ ತಿಂಡಿ, ಊಟದ ವಿಚಾರಕ್ಕೆ ಮಹಾ ರಾದ್ಧಾಂತ ಮಾಡಿಕೊಳ್ಳುವ ಸ್ಪರ್ಧಿಗಳು, ಮನೆಯಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಕೈ ಮಾಡಿದಾಗ ತುಟಿಕ್ ಪಿಟಿಕ್ ಎನ್ನದಿರುವುದೇ 'ವಿಚಿತ್ರ'.!'ಕೈ ಮಾಡಿದ್ದು ತಪ್ಪು' ಅಂತ ಸಂಯುಕ್ತಗೆ ಯಾರೂ ಹೇಳುವುದೇ ಇಲ್ಲ. ಸಮೀರಾಚಾರ್ಯ ಬಳಿ ಯಾರೊಬ್ಬರೂ ಬಂದು ಮಾತನಾಡುವುದಿಲ್ಲ. ಈ 'ವಿಚಿತ್ರ' ನಡವಳಿಕೆ ಕಂಡ ಕಿಚ್ಚ ಸುದೀಪ್ ಅವರಿಗೂ ಬೇಸರವಾಗಿದೆ. 'ಸೈಲೆಂಟ್' ಆಗಿದ್ದ ಸ್ಪರ್ಧಿಗಳನ್ನ, ಬೇಕು ಬೇಕು ಅಂತ ವೈಲೆಂಟ್ ಆಗುವ ಸ್ಪರ್ಧಿಗಳನ್ನೆಲ್ಲ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಬೆಂಡೆತ್ತಿದ್ದಾರೆ ಸುದೀಪ್.

Share This Video


Download

  
Report form
RELATED VIDEOS