ಸೀಕ್ರೆಟ್ ರೂಮ್ ಗೆ ಹೋದ ಜೈ ಶ್ರೀನಿನಿವಾಸನ್ | ಮುಂದೇನು? | Filmibeat Kannada

Filmibeat Kannada 2017-12-27

Views 1.2K

Bigg Boss Kannada 5: Week 11: Jayasreenivasan is sent to Secret Room. What happens next? Contestants are also confused! Watch video to know more.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಹತ್ತು ವಾರಗಳು ಕಳೆದಿವೆ. ಇಷ್ಟು ದಿನಗಳು ಉರುಳಿದ್ದರೂ, ಇಲ್ಲಿಯವರೆಗೂ 'ಸೀಕ್ರೆಟ್ ರೂಮ್' ಬಾಗಿಲನ್ನ ಯಾವೊಬ್ಬ ಸ್ಪರ್ಧಿಗೂ 'ಬಿಗ್ ಬಾಸ್' ತೆಗೆದಿರಲಿಲ್ಲ. ಎಲಿಮಿನೇಟ್ ಆದ ಯಾರಿಗೂ 'ಸೀಕ್ರೆಟ್ ರೂಮ್' ಒಳಗೆ ಹೋಗುವ ಅವಕಾಶವನ್ನ 'ಬಿಗ್ ಬಾಸ್' ನೀಡಿರಲಿಲ್ಲ. ಆದ್ರೆ ಇದೀಗ ದಿಢೀರ್ ಅಂತ 'ಬಿಗ್ ಬಾಸ್' ಮನೆಯ ಸೀಕ್ರೆಟ್ ರೂಮ್ ಬಾಗಿಲು ಓಪನ್ ಆಗಿದೆ. ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಸೀಕ್ರೆಟ್ ರೂಮ್ ಒಳಗೆ ಪದಾರ್ಪಣೆ ಮಾಡಿದ್ದಾರೆ. ಇದ್ದಕ್ಕಿದ್ದಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಜಯಶ್ರೀನಿವಾಸನ್ ನೇರವಾಗಿ ಸೀಕ್ರೆಟ್ ರೂಮ್ ಗೆ ತೆರಳಿದ್ದಾರೆ. ಮನೆಯಲ್ಲಿ ಏನೆಲ್ಲ ನಡೆಯುತ್ತಿದೆ ಅಂತ ಸೀಕ್ರೆಟ್ ರೂಮ್ ಒಳಗೆ ಕೂತು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಮೊದಲ ಸ್ಪರ್ಧಿ ಜಯಶ್ರೀನಿವಾಸನ್. 'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೃಹಪ್ರವೇಶ ಮಾಡಿದ್ಮೇಲೆ, ಅವರು ನೇರವಾಗಿ ತೆರಳಿದ್ದು ಕನ್ಫೆಶನ್ ರೂಮ್ ಒಳಗೆ. ಸತತವಾಗಿ 11-12 ಗಂಟೆಗಳ ಕಾಲ ಕನ್ಫೆಶನ್ ರೂಮ್ ಒಳಗೆ ಕೂತು ಮಿಕ್ಕ ಎಲ್ಲ ಸ್ಪರ್ಧಿಗಳ ಎಂಟ್ರಿಯನ್ನ ಅಲ್ಲಿಂದಲೇ ವೀಕ್ಷಿಸುತ್ತಿದ್ದರು ಜಯಶ್ರೀನಿವಾಸನ್.

Share This Video


Download

  
Report form
RELATED VIDEOS