ನಟ ದರ್ಶನ್ ತುಂಬ ಕಷ್ಟ ದಿಂದ ಮೇಲೆ ಬಂದ ನಟ. ಚಿತ್ರರಂಗದಲ್ಲಿ ಅವರ ತಂದೆ ತೂಗುದೀಪ ಶ್ರೀನಿವಾಸ್ ದೊಡ್ಡ ಹೆಸರು ಮಾಡಿದ್ದರು ಕೂಡ ದರ್ಶನ್ ಪ್ರಾರಂಭದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿ ತಮ್ಮ ಸ್ವಂತ ಪ್ರಯತ್ನದಿಂದ ಇವತ್ತು ಈ ಮಟ್ಟಿಗೆ ಬೆಳೆದಿದ್ದಾರೆ. ದರ್ಶನ್ ಸುಮಾರು ವರ್ಷಗಳ ಹಿಂದೆ ಚಂದನ ವಾಹಿನಿಗೆ ಒಂದು ಸಂದರ್ಶನ ನೀಡಿದ್ದರು. ಈ ಅಪರೂಪದ ಸಂದರ್ಶನದಲ್ಲಿ ದರ್ಶನ್ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಅಂದರೆ ಆ ಸಂದರ್ಶನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್ ಅವರ ಅನೇಕ ಕಷ್ಟದ ಸಂಗತಿಗಳು ಇದನ್ನು ನೋಡಿದಾಗ ತಿಳಿಯುತ್ತಿದೆ. ಅದರಲ್ಲಿ ಒಂದು ತಂದೆ ತೂಗುದೀಪ್ ನಿಧನರಾದ ದಿನ ದರ್ಶನ್ ಪಟ್ಟ ಪಾಡು. ಆ ವೇಳೆ ಇನ್ನು ನೀನಾಸಂ ನಲ್ಲಿ ನಾಟಕ ಕಲಿಯುತ್ತಿದ್ದ ದರ್ಶನ್ ತಂದೆ ಸಾವಿನ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ.
Kannada actor Challenging Star Darshan spoke about his father Thoogudeepa Srinivas in a Private Channel interview. Darshan shares an incident, where he struggled to reach home to see his father.