ಹೊಸ ವರ್ಷ ಎಂದಾಕ್ಷಣ ಪರಸ್ಪರ ವಿಶ್ ಮಾಡಿಕೊಳ್ಳುವುದು, ಹೂಗುಚ್ಚ, ಸಿಹಿ ತಿನಿಸುಗಳು, ಕೇಕ್ ಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ನೀಡುವುದು ಸಾಮಾನ್ಯ ಆದರೆ ಯಾರೂ ಊಹಿಸಲಾಗದ ಉಡುಗೊರೆಯನ್ನು ಪೊಲೀಸರು ನೀಡಿದ್ದಾರೆ. ಅಚ್ಚರಿ ಎನ್ನಿಸಿದರೂ ಸತ್ಯ, ರಾಜಧಾನಿ ಪೊಲೀಸರು, ನಾಗರಿಕರಿಗೆ ಕಳವು ವಸ್ತುಗಳನ್ನು ಪತ್ತೆ ಮಾಡಿ ಭಾನುವಾರ ರಾತ್ರಿಇ ಮರಳಿಸುವ ಮೂಲಕ ನೀತನ ವರ್ಷದ ಶುಭ ಕೋರಿದ್ದಾರೆ. ಪೊಲೀಸ ಆಯುಕ್ತರ ಸೂಚನೆ ಮೇರೆಗೆ ಕಳವು ಪ್ರಕರಣಗಳಲ್ಲಿ ಪತ್ತೆಯಾಗಿದ್ದ ವಸ್ತುಗಳನ್ನು ಪೊಲೀಸರು, ರಾತ್ರಿ ವಾರಸುದಾರರಿಗೆ ಹಸ್ತಾಂತರಿಸಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.ಇನ್ನೂ ರಾತ್ರಿ ಮನೆಗೆ ಬಂದ ಪೊಲೀಸರು ಗಿಫ್ಟ್ ನೀಡಿದ್ದು ಜನರ ಮೊಗದಲ್ಲಿ ಅನಿರೀಕ್ಷಿತವಾಗಿ ಗತಿಸಿದ ಸಂತಸ ಗಳಿಗೆಯಾಗಿದೆ. ಮೈಕೋ ಲೇಔಟ್, ಯಲಹಂಕ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಕೆಲವು ಠಾಣೆಗಳ ಪೊಲೀಸರು, ಮಧ್ಯರಾತ್ರಿಯಲ್ಲಿ ಜನರಿಗೆ ಅಚ್ಚರಿ ಗಿಫ್ಟ್ ನೀಡಿದ್ದಾರೆ.ಮೈಕೋ ಲೇಔಟ್ ಉಪ ವಿಭಾಗ ಎಸಿಪಿ ಕರಿ ಬಸವನಗೌಡ ಮತ್ತು ಬೊಮ್ಮನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಅವರು ಬೊಮ್ಮನಹಳ್ಳಿಯ ನಂದ ಕಿಶೋರ್ ಮನೆಗೆ ತೆರಳಿ ೩ ಲಕ್ಷ ರೂ ಮೌಲ್ಯದ ೫೦ ಗ್ರಾಂ ಚಿನ್ನದ ಸರವನ್ನು ಮರಳಿಸಿದ್ದಾರೆ.
An unique initiative by Bengaluru police has been applauded by the general public as they has returned properties which recovered on the eve of new year day. Many citizens appreciated in their tweeter account regarding surprises given by the Bengaluru cops.